ಗುರುವಾರ , ಆಗಸ್ಟ್ 13, 2020
27 °C

2017 ಕ್ಯಾಟ್‌ ಪರೀಕ್ಷೆ ಫಲಿತಾಂಶ: ಶೇ.100 ಅಂಕ ಗಳಿಸಿದ 20 ವಿದ್ಯಾರ್ಥಿಗಳು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

2017 ಕ್ಯಾಟ್‌ ಪರೀಕ್ಷೆ ಫಲಿತಾಂಶ: ಶೇ.100 ಅಂಕ ಗಳಿಸಿದ 20 ವಿದ್ಯಾರ್ಥಿಗಳು

ನವದೆಹಲಿ: ದೇಶದ ಎಲ್ಲ ಐಐಎಂ (ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್) ಹಾಗೂ ಬ್ಯುಸಿನೆಸ್ ಸ್ಕೂಲ್‌ಗಳ ಪ್ರವೇಶಕ್ಕಾಗಿ ನಡೆದಿದ್ದ ಸಾಮಾನ್ಯ ದಾಖಲಾತಿ ಪರೀಕ್ಷೆ (ಕ್ಯಾಟ್) ಫಲಿತಾಂಶ ಸೋಮವಾರ ಪ್ರಕಟವಾಗಿದೆ.

2017ರ ನವೆಂಬರ್‌ 26ರಂದು ದೇಶದ 140 ನಗರಗಳಲ್ಲಿ ಪರೀಕ್ಷೆ ನಡೆದಿತ್ತು. ಪರೀಕ್ಷೆ ಬರೆದಿದ್ದ ಒಟ್ಟು 1,99,632 ಅಭ್ಯರ್ಥಿಗಳಲ್ಲಿ 20 ಮಂದಿ ಶೇ.100 ಅಂಕ ಸಾಧನೆ ಮಾಡಿದ್ದಾರೆ.

‘2016ರಲ್ಲಿಯೂ 20 ಅಭ್ಯರ್ಥಿಗಳು ಶೇ.100 ಅಂಕದೊಂದಿಗೆ ತೇರ್ಗಡೆಯಾಗಿದ್ದರು. ಎಲ್ಲ ಅಭ್ಯರ್ಥಿಗಳೂ ಎಂಜಿನಿಯರಿಂಗ್‌ ಹಿನ್ನಲೆಯವರಾಗಿದ್ದರು. ಜತೆಗೆ, ಪಟ್ಟಿಯಲ್ಲಿ ಒಬ್ಬರೂ ವಿದ್ಯಾರ್ಥಿನಿಯರಿರಲಿಲ್ಲ. ಆದರೆ, ಈ ಬಾರಿ ಶೇ. 100 ಅಂಕ ಪಡೆದಿರುವ 20 ಅಭ್ಯರ್ಥಿಗಳ ಪಟ್ಟಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರಿದ್ದು, ಎಂಜಿನಿಯರಿಂಗೇತರ ಮೂವರು ಇದ್ದಾರೆ’ ಎಂದು ಲಖನೌ ಐಐಎಂನ ಕ್ಯಾಟ್‌ ಪರೀಕ್ಷೆ ಸಮನ್ವಯಾಧಿಕಾರಿ ತಿಳಿಸಿದ್ದಾರೆ.

ಅಭ್ಯರ್ಥಿಗಳು ಕ್ಯಾಟ್‌ ಅಧಿಕೃತ ವೆಬ್‌ಸೈಟ್‌(www.iimcat.ac.in) ಸಂಪರ್ಕಿಸಿ ತಮ್ಮ ಅಂಕಪಟ್ಟಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ದೇಶದಲ್ಲಿ ಒಟ್ಟು 20 ಐಐಎಂಗಳಿದ್ದು, ಪ್ರತಿವರ್ಷ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಅಧ್ಯಯನಕ್ಕೆ 4000 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಐಐಎಂ ಸೇರಿದಂತೆ ಸುಮಾರು 100 ಪ್ರಮುಖ ಶಿಕ್ಷಣ ಸಂಸ್ಥೆಗಳು ಕ್ಯಾಟ್‌ ಫಲಿತಾಂಶದ ಆಧಾರದಲ್ಲಿ ದಾಖಲಾತಿ ಪ್ರಕ್ರಿಯೆ ನಡೆಸುತ್ತವೆ.

ಕ್ಯಾಟ್‌ ಅಂಕಗಳಿಗೆ ಅನುಗುಣವಾಗಿ ತನ್ನ ದಾಖಲಾತಿ ಪ್ರಕ್ರಿಯೆ ಕುರಿತು ಐಐಎಂ ಮುಂದಿನ ಪ್ರಕಟಣೆಗಳಲ್ಲಿ ತಿಳಿಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.