ಮನೆಯಂಗಳದಲ್ಲೇ ಪಿಚ್‌; ತಂದೆ ಕೋಚ್‌

7
ಅಂತರ ಶಾಲಾ ಕ್ರಿಕೆಟ್‌ನಲ್ಲಿ 400 ರನ್ ಸಿಡಿಸಿದ ಪೋರ ಶೀಸ್ ಅಲಿ ಯಶೋಗಾಥೆ

ಮನೆಯಂಗಳದಲ್ಲೇ ಪಿಚ್‌; ತಂದೆ ಕೋಚ್‌

Published:
Updated:
ಮನೆಯಂಗಳದಲ್ಲೇ ಪಿಚ್‌; ತಂದೆ ಕೋಚ್‌

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿರುವ ಮನೆಯಂಗಳದಲ್ಲೇ ಸುಸಜ್ಜಿತ ಪಿಚ್‌ ಮತ್ತು ನೆಟ್ಸ್‌. ಬೌಲಿಂಗ್ ಮಾಡಲು ಸೈಡ್ ಆರ್ಮ್ ಉಪಕರಣ; ನಿತ್ಯದ ಅಭ್ಯಾಸಕ್ಕೆ ತಂದೆಯೇ ಕೋಚ್‌.

16 ವರ್ಷದೊಳಗಿನವರ ಕೆಎಸ್‌ಸಿಎ ಶಿವಮೊಗ್ಗ ವಲಯ ಅಂತರ ಕ್ಲಬ್‌ ಲೀಗ್ ಟೂರ್ನಿಯ ಒಂದೇ ಪಂದ್ಯದಲ್ಲಿ 400 ರನ್‌ ಗಳಿಸಿದ ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಅರೇಹಳ್ಳಿಯ ಮಹಮ್ಮದ್ ಶೀಸ್ ಅಲಿ ಅವರ ಯಶೋಗಾಥೆಗೆ ಈ ’ಅತ್ಯಾಧುನಿಕ’ ಸೌಲಭ್ಯಗಳೇ ಕಾರಣ.

ತಂದೆ ಅಶ್ರಫ್ ಅಲಿ ‘ಗಲ್ಲಿ ಕ್ರಿಕೆಟ್‌’ನಲ್ಲಿ ಆಡಿದ ವೇಗದ ಬೌಲರ್‌. ಮಗನನ್ನು ಕ್ರಿಕೆಟ್ ಆಟಗಾರನನ್ನಾಗಿಸಬೇಕು ಎಂಬ ಬಯಕೆಯಿಂದ ಸಿಟಿ ಕ್ರಿಕೆಟರ್ಸ್‌ ಕ್ಲಬ್‌ಗೆ ಸೇರಿಸಿದರು. ಆದರೆ 40 ಕಿಲೋಮೀಟರ್ ದೂರದ ಹಾಸನದಲ್ಲಿರುವ ಈ ಕ್ಲಬ್‌ನಲ್ಲಿ ನಿತ್ಯ ಅಭ್ಯಾಸಕ್ಕೆ ಹೋಗಲು ಕಷ್ಟವಾಯಿತು. ಹೀಗಾಗಿ ಮನೆಯಲ್ಲೇ ಸೌಲಭ್ಯಗಳನ್ನು ಒದಗಿಸಲು ಮುಂದಾದರು.

‘ನಾನು ಕ್ರಿಕೆಟಿಗನಾಗಿದ್ದೆ. ಆದರೆ ಹೊರ ಜಗತ್ತಿಗೆ ತೆರೆದುಕೊಳ್ಳಲು ಸಾಧ್ಯವಾಗಲಿಲ್ಲ. ಮಗನನ್ನು ಉತ್ತಮ ಆಟಗಾರನನ್ನಾಗಿಸಬೇಕೆಂದು ಬಯಸಿ ಇಷ್ಟೆಲ್ಲ ವ್ಯವಸ್ಥೆ ಮಾಡಿದ್ದೇನೆ’ ಎಂದು ಅಶ್ರಫ್ ಅಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶೀಸ್ ಅಲಿ ಅರೇಹಳ್ಳಿಯ ಮಲ್ನಾಡ್‌ ಇಂಗ್ಲಿಷ್ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ. ತಂದೆ ಈ ಶಾಲೆಯ ಆಡಳಿತ ಮಂಡಳಿಯಲ್ಲಿದ್ದಾರೆ. ತಾಯಿ ಶಬಾನ ಅಲಿ ಮುಖ್ಯ ಶಿಕ್ಷಕಿ.

ಏಳನೇ ತರಗತಿಯಲ್ಲಿದ್ದಾಗ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಶೀಜ್‌ ಅಂತರ ಶಾಲೆ, ಅಂತರ ಜಿಲ್ಲೆ ಮತ್ತು ಅಂತರ ವಲಯ ಮಟ್ಟದ ಟೂರ್ನಿಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಅಶ್ರಫ್ ಅಲಿ ತಿಳಿಸಿದರು.

‘ಅಂತರ ಕ್ಲಬ್ ಪಂದ್ಯಗಳಲ್ಲಿ ಎರಡು ಬಾರಿ ಶತಕ ಸಿಡಿಸಿ ಮಿಂಚಿದ್ದಾನೆ. ಅಂತರ ಜಿಲ್ಲಾ ಟೂರ್ನಿಯಲ್ಲಿ ಅತ್ಯಧಿಕ 75 ರನ್‌ ಗಳಿಸಿದ್ದಾನೆ. ಅಂತರ ಕ್ಲಬ್‌ ಟೂರ್ನಿಯಲ್ಲಿ ಇಷ್ಟು ದೊಡ್ಡ ಮೊತ್ತ ಗಳಿಸುತ್ತಾನೆ ಎಂದು ಕನಸು ಕೂಡ ಕಂಡಿರಲಿಲ್ಲ. ಆತನ ಸಾಧನೆಗೆ ಅತ್ಯಂತ ಖುಷಿಯಾಗಿದೆ’ ಎಂದು ಅವರು ಹೇಳಿದರು.

‘ಟೂರ್ನಿಗಳು ಇದ್ದಾಗ ಕ್ಲಬ್‌ನಲ್ಲಿ ಅಭ್ಯಾಸ ಮಾಡುತ್ತೇನೆ. ಪುಟ್ಟರಾಜು, ನಾಗರಾಜ ಮತ್ತು ನಟೇಶ ಅವರು ಅತ್ಯುತ್ತಮ ತಂತ್ರಗಳನ್ನು ಹೇಳಿಕೊಡುತ್ತಾರೆ. ತಂದೆ ಹೇಳಿಕೊಡುವ ತಂತ್ರಗಳನ್ನು ಕೂಡ ಪಂದ್ಯಗಳ ವೇಳೆ ಅಳವಡಿಸುತ್ತೇನೆ. ಹೀಗಾಗಿ ರನ್‌ ಗಳಿಸಲು ಸಾಧ್ಯವಾ

ಗುತ್ತದೆ’ ಎಂದು ಶೀಸ್ ಅಲಿ ತಿಳಿಸಿದರು.

ಲೆಗ್‌ ಸ್ಪಿನ್‌ ಬೌಲರ್‌:  ಬಲಗೈ ಬ್ಯಾಟ್ಸ್‌ಮನ್ ಆಗಿರುವ ಶೀಸ್ ಅಲಿ ಲೆಗ್ ಸ್ಪಿನ್ನರ್ ಕೂಡ ಆಗಿದ್ದಾರೆ. 14 ವರ್ಷದೊಳಗಿನವರ ರಾಜ್ಯ ತಂಡದ ಆಯ್ಕೆ ಟ್ರಯಲ್ಸ್‌ನಲ್ಲಿ ಕಳೆದ ಬಾರಿ ಒಟ್ಟು 17 ವಿಕೆಟ್ ಕಬಳಿಸಿ ಮಿಂಚಿದ್ದಾರೆ ಎಂದು ಅಶ್ರಫ್ ಅಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry