ಸಾಧು ಕೋಕಿಲಗೆ ನಿರೀಕ್ಷಣಾ ಜಾಮೀನು

7

ಸಾಧು ಕೋಕಿಲಗೆ ನಿರೀಕ್ಷಣಾ ಜಾಮೀನು

Published:
Updated:

ಮೈಸೂರು: ಮಸಾಜ್‌ ಸೆಂಟರ್‌ನ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹಾಸ್ಯನಟ ಸಾಧು ಕೋಕಿಲ ಅವರು ನ್ಯಾಯಾಲಯದಿಂದ ಸೋಮವಾರ ನಿರೀಕ್ಷಣಾ ಜಾಮೀನು ಪಡೆದರು.

ಬೋಗಾದಿಯ ರೈಲ್ವೆ ಬಡಾವಣೆಯ ‘ಲೈಕ್‌ ಟ್ರೆಂಡ್ ಹಾಗೂ ಫ್ಯಾಮಿಲಿ ಸಲೂನ್‌’ ಮೇಲೆ ದಾಳಿ ನಡೆಸಿದ ಸರಸ್ವತಿಪುರಂ ಠಾಣೆಯ ಪೊಲೀಸರು, 24 ವರ್ಷದ ಮಹಿಳೆಯನ್ನು ವೇಶ್ಯಾವಾಟಿಕೆ ಜಾಲದಿಂದ ರಕ್ಷಿಸಿದ್ದರು. ಹಾಸ್ಯನಟರು ಹಾಗೂ ಪೊಲೀಸ್ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡಿದ್ದ ಸಂಗತಿಯನ್ನು ಸಂತ್ರಸ್ತೆ ವಿಚಾರಣೆ ವೇಳೆ ಬಹಿರಂಗಪಡಿಸಿದ್ದರು.

ಬಂಧನ ಭೀತಿ ಎದುರಿಸುತ್ತಿದ್ದ ಸಾಧು ಕೋಕಿಲ ಅವರು ನಿರೀಕ್ಷಣಾ ಜಾಮೀನು ಕೋರಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಜ.1ರಂದು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಚಂದ್ರಶೇಖರ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರು. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮತ್ತೊಬ್ಬ ಹಾಸ್ಯನಟ ಮಂಡ್ಯ ರಮೇಶ್‌ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry