ರಾಷ್ಟ್ರರಾಜಧಾನಿಯಲ್ಲಿ ದಟ್ಟ ಮಂಜು: ವಿಮಾನ, ರೈಲು ಸಂಚಾರ ವ್ಯತ್ಯಯ

7

ರಾಷ್ಟ್ರರಾಜಧಾನಿಯಲ್ಲಿ ದಟ್ಟ ಮಂಜು: ವಿಮಾನ, ರೈಲು ಸಂಚಾರ ವ್ಯತ್ಯಯ

Published:
Updated:
ರಾಷ್ಟ್ರರಾಜಧಾನಿಯಲ್ಲಿ ದಟ್ಟ ಮಂಜು: ವಿಮಾನ, ರೈಲು ಸಂಚಾರ ವ್ಯತ್ಯಯ

ನವದೆಹಲಿ: ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಹೆಚ್ಚುತ್ತಿದ್ದು, ದಟ್ಟ ಮಂಜು ಕವಿಯುತ್ತಿದೆ. ಇದರಿಂದಾಗಿ ಮಂಗಳವಾರ ರೈಲು ಹಾಗೂ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ.

ಮಂಗಳವಾರ ದೆಹಲಿ ವಿಮಾನನಿಲ್ದಾಣದಲ್ಲಿ ಮಂಜು ಕವಿದು ವೀಕ್ಷಣೆ ಸಾಧ್ಯವಾಗದ ಕಾರಣ ಇಲ್ಲಿ ಇಳಿಯಬೇಕಿದ್ದ ಎರಡು ವಿಮಾನಗಳು, ಪ್ರಯಾಣ ಆರಂಭಿಸಬೇಕಿದ್ದ ಆರು ವಿಮಾನಗಳು ತಡವಾಗಿವೆ ಎಂದು ವರದಿಯಾಗಿದೆ.

ರೈಲು ಸಂಚಾರದಲ್ಲಿಯೂ ವ್ಯತ್ಯಯವಾಗಿದ್ದು, 45 ರೈಲುಗಳು ತಡವಾಗಿ ಬಂದಿವೆ, 22 ರೈಲುಗಳ ಪ್ರಯಾಣವನ್ನು ರದ್ದುಗೊಳಿಸಲಾಗಿದೆ, ನಾಲ್ಕು ರೈಲುಗಳ ಸಂಚಾರ ಸಮಯವನ್ನು ಬದಲಿಸಲಾಗಿದೆ.

ವಾಯು ಮಾಲಿನ್ಯವೂ ಹೆಚ್ಚಿದ್ದು, ಗಾಳಿಯ ಗುಣಮಟ್ಟ ಅತ್ಯಂತ ಕೆಳಮಟ್ಟದಲ್ಲಿದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry