ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲ್ಮೆಟ್‌ ಧರಿಸದ 42 ಮಂದಿ ಸಾವು

Last Updated 9 ಜನವರಿ 2018, 4:58 IST
ಅಕ್ಷರ ಗಾತ್ರ

ಮೈಸೂರು: ತಲೆಗೆ ಸುರಕ್ಷಿತ ಹೆಲ್ಮೆಟ್‌ ಧರಿಸದ ಪರಿಣಾಮ 2017ರಲ್ಲಿ 42 ಮಂದಿ ದ್ವಿಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸ್‌ ಕಮಿಷನರ್‌ ಡಾ.ಎ.ಸುಬ್ರಮಣ್ಯೇಶ್ವರ ರಾವ್‌ ಮಾಹಿತಿ ನೀಡಿದರು.

‘ಕಳೆದ ವರ್ಷ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ 134 ಮಂದಿ ಮೃತಪಟ್ಟಿದ್ದಾರೆ. ಐಎಸ್‌ಐ ಗುರುತಿನ ಹೆಲ್ಮೆಟ್‌ ಹಾಕಿಕೊಂಡಿದ್ದರೆ 42 ಸವಾರರಲ್ಲಿ ಬಹುತೇಕರ ಪ್ರಾಣ ಉಳಿಯುವ ಸಾಧ್ಯತೆ ಇತ್ತು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ದ್ವಿಚಕ್ರ ವಾಹನ ಸವಾರರು ಗುಣಮಟ್ಟದ ಹೆಲ್ಮೆಟ್‌ ಧರಿಸಿದರೆ ಅಪಘಾತದಲ್ಲಿ ಸಾವಿನ ದವಡೆಯಿಂದ ಪಾರಾಗಬಹುದು. ಸವಾರರ ಪ್ರಾಣ ರಕ್ಷಿಸುವ ಉದ್ದೇಶದಿಂದ ‘ಆಪರೇಷನ್‌ ಸೇಫ್ ರೈಡ್‌’ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಆದರೆ, ಸಾಮಾಜಿಕ ಜಾಲ ತಾಣದಲ್ಲಿ ಪೊಲೀಸರ ಕಾಳಜಿ ಯನ್ನು ಅಪಹಾಸ್ಯ ಮಾಡುವ, ಸಂಚಾರ ನಿಯಮ ಉಲ್ಲಂಘಿಸುವಂತೆ ಪ್ರೇರೇಪಿಸುವ ಸಂದೇಶ ರವಾನಿಸಲಾಗುತ್ತಿದೆ’ ಎಂದು ಬೇಸರಿಸಿದರು.

ಹೆಲ್ಮೆಟ್ ಮರಳಿ ಪಡೆಯಿರಿ

‘ಆಪರೇಷನ್ ಸೇಫ್ ರೈಡ್’ ಕಾರ್ಯಾಚರಣೆಯ ವೇಳೆ ವಶಪಡಿಸಿಕೊಂಡ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ಸವಾರರು ಮರಳಿ ಪಡೆಯಲು ಪೊಲೀಸರು ಅವಕಾಶ ಕಲ್ಪಿಸಿದ್ದಾರೆ.

‘ಜ.2ರಂದು ನಡೆದ ಕಾರ್ಯಾಚರಣೆಯಲ್ಲಿ 15,501 ಅರ್ಧ ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸವಾರರ ಹೆಸರು ಹಾಗೂ ದೂರವಾಣಿ ಸಂಖ್ಯೆಯನ್ನೂ ಸಂಗ್ರಹಿಸಲಾಗಿದೆ. ಆಸಕ್ತರು ಸಂಬಂಧಿಸಿದ ಠಾಣೆಗೆ ಧಾವಿಸಿ ಇವುಗಳನ್ನು ಮರಳಿ ಪಡೆಯಬಹುದು. ಆದರೆ, ಇವುಗಳನ್ನು ಧರಿಸುವಂತಿಲ್ಲ’ ಎಂದು ಸ್ಪಷ್ಪಡಿಸಿದರು.

‘ಐಎಸ್‌ಐ ಗುರುತಿನ ಹೆಲ್ಮೆಟ್‌ ಖರೀದಿಸಲು ಜ.31ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಆ ನಂತರವೂ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

* * 

ಯಮದ ಪ್ರಕಾರ ಐಎಸ್‌ಐ ಗುರುತಿನ ಹೆಲ್ಮೆಟ್‌ ಧರಿಸುವುದು ಕಡ್ಡಾಯ. ಅಮೆರಿಕದ ಡಿಒಟಿ ಹಾಗೂ ಯುರೋಪಿನ ಇಸಿಇ ಮಾನದಂಡ ಇಲ್ಲಿಗೆ ಅನ್ವಯಿಸದು
ಡಾ.ಎ.ಸುಬ್ರಮಣ್ಯೇಶ್ವರ ರಾವ್‌
ಪೊಲೀಸ್‌ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT