ಬಹ್ರೈನ್‌: ಭಾರತ ಮತ್ತೆ ಭೀತಿಯಲ್ಲಿದೆ - ರಾಹುಲ್ ಗಾಂಧಿ

7

ಬಹ್ರೈನ್‌: ಭಾರತ ಮತ್ತೆ ಭೀತಿಯಲ್ಲಿದೆ - ರಾಹುಲ್ ಗಾಂಧಿ

Published:
Updated:
ಬಹ್ರೈನ್‌: ಭಾರತ ಮತ್ತೆ ಭೀತಿಯಲ್ಲಿದೆ - ರಾಹುಲ್ ಗಾಂಧಿ

ಮನಾಮ (ಬಹ್ರೈನ್): ‘ಭಾರತ ಇಂದು ಸ್ವತಂತ್ರವಾಗಿದೆ. ಆದರೆ ಮತ್ತೆ ಭೀತಿ ಎದುರಿಸುತ್ತಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಬಹ್ರೈನ್‌ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಅವರು ಭಾಷಣ ಮಾಡಿದರು.

‘ಭಾರತ ಪ್ರಮುಖವಾಗಿ ಎರಡು ಬೆದರಿಕೆಗಳನ್ನು ಎದುರಿಸುತ್ತಿದೆ. ಉದ್ಯೋಗ ಸೃಷ್ಟಿಸುವಲ್ಲಿ ನಮ್ಮ ಸರ್ಕಾರ ವಿಫಲವಾಗಿದೆ’ ಎಂದು ರಾಹುಲ್ ಹೇಳಿದರು.

ಸರ್ಕಾರ ಜಾತಿ ಮತ್ತು ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುತ್ತಿದೆ. ಉದ್ಯೋಗವಿಲ್ಲದ ಯುವಕರ ಕೋಪವನ್ನು ಕೋಮುಗಳ ನಡುವಣ ದ್ವೇಷ ಬಿತ್ತಲು ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

ಮುಂದಿನ ಆರು ತಿಂಗಳಲ್ಲಿ ಪಕ್ಷಕ್ಕೆ ಹೊಸ ಕಳೆ ಬರುವಂತೆ ಮಾಡುವುದಾಗಿಯೂ ಸಂಘಟನೆಯಲ್ಲಿ ಬದಲಾವಣೆ ಮಾಡುವುದಾಗಿಯೂ ರಾಹುಲ್ ಭರವಸೆ ನೀಡಿದರು. ಅಲ್ಲದೆ, ಭಾರತ ಎದುರಿಸುತ್ತಿರುವ ಗಂಭೀರ ಸಮಸ್ಯೆಯ ಪರಿಹಾರಕ್ಕೆ ನೆರವಾಗುವಂತೆ ಅನಿವಾಸಿ ಭಾರತೀಯರಿಗೆ ಕರೆ ನೀಡಿದರು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry