ಮಂಗಳಮುಖಿಯರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಯಲಿ: ಅಮೃತ್ ಶೆಣೈ

7

ಮಂಗಳಮುಖಿಯರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಯಲಿ: ಅಮೃತ್ ಶೆಣೈ

Published:
Updated:

ಉಡುಪಿ: ರಂಗಭೂಮಿ ಉಡುಪಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ಆಯೋಜಿ ಸಿದ್ದ ಎರಡು ದಿನಗಳ ನಾಟಕೋತ್ಸವ ಕಾರ್ಯಕ್ರಮವನ್ನು ಸಮಾಜ ಸೇವಕ ಯು. ವಿಶ್ವನಾಥ್ ಶೆಣೈ ಉದ್ಘಾಟಿಸಿದರು.

ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಅಮೃತ್ ಶೆಣೈ ಮಾತ ನಾಡಿ, ‘ರಂಗಭೂಮಿಯ ಈ ವರ್ಷದ ನಾಟಕದಲ್ಲಿ ಮಂಗಳಮುಖಿಯರ ಜೀವನದ ವೃತ್ತಾಂತವನ್ನು ತೋರಿಸುತ್ತಿರುವುದು ಶ್ಲಾಘನೀಯ. ತೃತೀಯ ಲಿಂಗಿಗಳ ಬಗ್ಗೆ ಹಿಂದೆ ತಾತ್ಸಾರದ ಮನೋಭಾವವಿತ್ತು. ಆದರೆ, ಈಗ ಜನರಲ್ಲಿ ಜಾಗೃತಿ ಮೂಡಿದೆ. ಅವರಿಗೆ ಸರ್ಕಾರ ಸಹ ಮತದಾನದ ಹಕ್ಕು, ವಿಶೇಷ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಹಾಗೆಯೇ ಜನರು ಕೂಡ ಅವರಿಗೆ ಅವಕಾಶವನ್ನು ಕಲ್ಪಿಸಿಕೊಡುವುದರ ಜತೆಗೆ ಅವರನ್ನು ಪ್ರೀತಿಯಿಂದ ಕಾಣಬೇಕು. ಆ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು’ ಎಂದರು.

ಕೋಟೇಶ್ವರದ ಝೈಬ್ ಕ್ರಿಯೇಶನ್‌ನ ಆಸ್ಮಾ, ರಂಗಭೂಮಿಯ ಉಪಾಧ್ಯಕ್ಷ ನಂದಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ

ಉಪಸ್ಥಿತರಿದ್ದರು. ರಂಗಭೂಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಂಟಿ ಕಾರ್ಯದರ್ಶಿ ಎಚ್.ಪಿ. ರವಿರಾಜ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ರಂಗಭೂಮಿಯ ವರ್ಷದ ನಾಟಕ ‘ಐಸಿಯು’ ಪ್ರದರ್ಶನಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry