ಪೊಲೀಸ್‌ ಅನುಮತಿ ನಿರಾಕರಣೆ ಹೊರತಾಗಿಯೂ ಜಿಗ್ನೇಶ್ ರ‍್ಯಾಲಿ?

7

ಪೊಲೀಸ್‌ ಅನುಮತಿ ನಿರಾಕರಣೆ ಹೊರತಾಗಿಯೂ ಜಿಗ್ನೇಶ್ ರ‍್ಯಾಲಿ?

Published:
Updated:
ಪೊಲೀಸ್‌ ಅನುಮತಿ ನಿರಾಕರಣೆ ಹೊರತಾಗಿಯೂ ಜಿಗ್ನೇಶ್ ರ‍್ಯಾಲಿ?

ನವದೆಹಲಿ: ಪೊಲೀಸರ ಅನುಮತಿ ನಿರಾಕರಣೆಯ ಹೊರತಾಗಿಯೂ ಇಲ್ಲಿನ ಪಾರ್ಲಿಮೆಂಟ್‌ ಸ್ಟ್ರೀಟ್‌ನಲ್ಲಿ ರ‍್ಯಾಲಿ ನಡೆಸಲು ಗುಜರಾತ್‌ನ ವಡ್‌ಗಾಮ್ ಕ್ಷೇತ್ರದ ಶಾಸಕ, ದಲಿತ ನಾಯಕ ಜಿಗ್ನೇಶ್ ಮೇವಾನಿ ಮುಂದಾಗಿದ್ದಾರೆ.

ದಲಿತ ಸಂಘಟನೆ ಭೀಮ್ ಆರ್ಮಿಯ ಸಂಸ್ಥಾಪಕರ ಬಿಡುಗಡೆಯ ಬೇಡಿಕೆ, ಶೈಕ್ಷಣಿಕ, ಉದ್ಯೋಗ, ಜೀವಿಸುವ ಹಕ್ಕು ಮತ್ತು ಲಿಂಗ ಅಸಮಾನತೆಯ ವಿರುದ್ಧ ಜಿಗ್ನೇಶ್ ಮೇವಾನಿ ನೇತೃತ್ವದಲ್ಲಿ ‘ಯುವ ಹೂಂಕಾರ್ ರ‍್ಯಾಲಿ’ ಹಮ್ಮಿಕೊಳ್ಳಲಾಗಿದೆ. ಮೇವಾನಿ ಮತ್ತು ಅಸ್ಸಾಂನ ಕೃಷಿಕಾರ್ಮಿಕರ ಸಂಘಟನೆಯ ನಾಯಕ ಅಖಿಲ್ ಗೊಗೊಯ್ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಮಧ್ಯೆ, ‘ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಆದೇಶದಂತೆ ಪಾರ್ಲಿಮೆಂಟ್ ಸ್ಟ್ರೀಟ್‌ನಲ್ಲಿ ಯಾವುದೇ ರ‍್ಯಾಲಿಗೆ ಅವಕಾಶ ನೀಡುವುದಿಲ್ಲ. ಬೇರೆ ಪ್ರದೇಶವನ್ನು ಆರಿಸುವಂತೆ ಸಂಘಟಕರಿಗೆ ಸೂಚಿಸಲಾಗಿದೆ’ ಎಂದು ದೆಹಲಿಯ ಪೊಲೀಸ್ ಉಪ ಆಯುಕ್ತರು ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry