ರೈತರ ಅನುಕೂಲಕ್ಕೆ ಬ್ಯಾರೇಜ್ ನಿರ್ಮಾಣ: ಮೇಟಿ

7

ರೈತರ ಅನುಕೂಲಕ್ಕೆ ಬ್ಯಾರೇಜ್ ನಿರ್ಮಾಣ: ಮೇಟಿ

Published:
Updated:

ಕಮತಗಿ (ಅಮೀನಗಡ): ‘ರೈತರ ಅನುಕೂಲಕ್ಕಾಗಿ ಬ್ಯಾರೇಜ್ ಮತ್ತು ರಸ್ತೆ ನಿರ್ಮಾಣವನ್ನು ಮಾಡಲಾಗುತ್ತಿದೆ’ ಎಂದು ಶಾಸಕ ಎಚ್.ವೈ ಮೇಟಿ ಹೇಳಿದರು. ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಇಂಗಳಗಿ ಮತ್ತು ಕಡಿವಾಲ ಗ್ರಾಮದ ಹತ್ತಿರ ಹಳ್ಳಕ್ಕೆ ಸೇತುವೆ ಸಹಿತ ಎರಡು ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

‘ಈ ಭಾಗದ ಜನರ ಸುಮಾರು ದಿನಗಳ ಕನಸು ನನಸಾಗಿದೆ. ನಡೆದಾಡಲು ಉತ್ತಮ ರಸ್ತೆ ನಿರ್ಮಾಣ ಹಾಗೂ ರೈತರಿಗೆ ನೀರಾವರಿ ಸೌಲಭ್ಯವೂ ದೊರಕಲಿದೆ. ಕಮತಗಿಯಿಂದ ಮೂಗನೂರ ಸಮೀಪದವರೆಗೆ ₹5 ಕೋಟಿ ವೆಚ್ಚದಲ್ಲಿ ಐದೂವರೆ ಕಿಲೋ ಮೀಟರ್‌ ಸುಸಜ್ಜಿತ ದ್ವಿಪಥ ರಸ್ತೆ ನಿರ್ಮಾಣವಾಗಲಿದೆ. ಅಂಬ್ಲಿಕೊಪ್ಪ ಮತ್ತು ಸುರಳಿಕಲ್ಲ ಗ್ರಾಮಕ್ಕೆ ತೆರಳುವ ಮಾರ್ಗವನ್ನು ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ಸೇತುವೆ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು’ ಎಂದರು.

‘ಈ ಭಾಗದ ಜನರಿಗೆ ಅನೇಕ ಮೂಲ ಸೌಕರ್ಯಗಳನ್ನು ಒದಗಿಸುವುದರ ಮೂಲಕ ಸಾಕಷ್ಟು ಅಭಿವೃಧ್ದಿ ಕೆಲಸಗಳನ್ನು ಮಾಡಲಾಗಿದೆ. ಇನ್ನೂ ಆಗಬೇಕಿರುವ ಕೆಲಸಗಳ ಕುರಿತು ಜನತೆ ತಮ್ಮ ಗಮನಕ್ಕೆ ತಂದರೆ ತಕ್ಷಣವೇ ಸ್ಪಂದಿಸಲಾಗುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಗಂಗೂಬಾಯಿ ಮೇಟಿ, ಮುಖಂಡರಾದ ಅರವಿಂದ ಮುರನಾಳ, ಸಂಗಮೇಶ ಗಡೇದ, ಕೆ.ಡಿ.ಓಲೇಕಾರ, ಕೋನಪ್ಪ ಮೂಗನೂರ, ಬಿ.ಎಚ್.ಬದಾಮಿ, ಆದಪ್ಪ ನಿಲೂಗಲ್ಲ, ಸಿದ್ರಾಮಪ್ಪ ಹೊಸಗೌಡ್ರ, ಭೀಮಪ್ಪ ಪತ್ತಾರ, ಹನಮಂತ ಕಾಗಿ, ಬಸಪ್ಪ ಮೂಲಿಮನಿ, ಯಮನಪ್ಪ ನದಾಫ್ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಯೋಗೆಪ್ಪ ತೆಗ್ಗಿ, ತಿಪ್ಪಣ್ಣ ಹರದೊಳ್ಳಿ, ಮಹದೇವಿ ಗಗನದ, ಚನಮಲ್ಲಪ್ಪ ಕೋಟಿ, ದೇವೆಂದ್ರಪ್ಪ ಮೇಟಿ, ಗುತ್ತಿಗೇದಾರ ನೀಲಕಂಠಪ್ಪ ಮದರಿ, ಬಿ.ಎ.ಮೇಟಿ, ನೀರಾವರಿ ಇಲಾಖೆಯ ಆರ್.ಜೆ.ಸೋಲ್ಲಾಪೂರ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry