ಪ್ರಾದೇಶಿಕ ಆಯುಕ್ತ ಮೇಘಣ್ಣವರ ಅಧಿಕಾರ ಸ್ವೀಕಾರ

7

ಪ್ರಾದೇಶಿಕ ಆಯುಕ್ತ ಮೇಘಣ್ಣವರ ಅಧಿಕಾರ ಸ್ವೀಕಾರ

Published:
Updated:

ಬೆಳಗಾವಿ: ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿ ಅಲೋಕ್‌ ಕುಮಾರ್‌ ಹಾಗೂ ಪ್ರಾದೇಶಿಕ ಆಯುಕ್ತರಾಗಿ ಪಿ.ಎ ಮೇಘಣ್ಣವರ ಸೋಮವಾರ ಅಧಿಕಾರ ಸ್ವೀಕರಿಸಿದರು. ‘ಇತರ ಜಿಲ್ಲೆಗಳಿಗೆ ಹೋಲಿಸಿದರೆ ಬೆಳಗಾವಿಯಲ್ಲಿ ಗಂಭೀರ ಎನ್ನುವಂತಹ ಅಪರಾಧ ಚಟುವಟಿಕೆಗಳು ನಡೆಯುವು ದಿಲ್ಲ. ಆಗಾಗ ನಡೆಯುವ ಸಣ್ಣಪುಟ್ಟ ಅಕ್ರಮ ಚಟುವಟಿಕೆಗಳು ಹಾಗೂ ಗುಂಪು ಘರ್ಷಣೆಗಳನ್ನು ನಿಯಂತ್ರಿಸಲು ಕ್ರಮಕೈಗೊಳ್ಳುತ್ತೇನೆ’ ಎಂದು ಐಜಿಪಿ ಅಲೋಕ್‌ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

‘ವಿಜಯಪುರ ಜಿಲ್ಲೆಯಲ್ಲಿರುವ ಅಕ್ರಮ ಶಸ್ತ್ರಾಸ್ತ್ರ ಹಾವಳಿಯನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಬೆಳಗಾವಿಯ ಜಿಲ್ಲೆಯ ಮರಳು ಮಾಫಿಯಾ ಹಾಗೂ ಮಟ್ಕಾ ದಂಧೆಯ ಬಗ್ಗೆ ವರದಿ ತರಿಸಿಕೊಂಡು, ಪರಿಶೀಲಿಸುತ್ತೇನೆ’ ಎಂದರು.

1996ರ ಐಪಿಎಸ್‌ ಬ್ಯಾಚ್‌ನಲ್ಲಿ ಆಯ್ಕೆಯಾದ ಅಲೋಕ್‌ಕುಮಾರ್‌, ತಮ್ಮ ಪ್ರೊಬೆಷನರಿ ಅವಧಿಯನ್ನು ಜಿಲ್ಲೆಯ ಬೈಲಹೊಂಗಲದಲ್ಲಿ ಪೂರ್ಣಗೊಳಿಸಿ ದ್ದರು. ಚಿತ್ರದುರ್ಗ ಹಾಗೂ ದಾವಣಗೆರೆ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಸಿಐಡಿ ಎಸ್ಪಿ, ಬೆಂಗಳೂರು ನಗರ ಜಂಟಿ ಪೊಲೀಸ್‌ ಆಯುಕ್ತ, ನಕ್ಸಲ್‌ ನಿಗ್ರಹ ಪಡೆಯ ಮುಖ್ಯಸ್ಥ ಹಾಗೂ ಕಲಬುರ್ಗಿ ವಲಯ ಐಜಿಪಿಯಾಗಿ ಕಾರ್ಯನಿರ್ವಹಿಸಿದ್ದರು.

ಜಿಲ್ಲೆಗೆ ಮರಳಿದ ಮೇಘಣ್ಣವರ: ಪ್ರಾದೇಶಿಕ ಆಯುಕ್ತರಾಗ ಅಧಿಕಾರ ವಹಿಸಿಕೊಂಡಿರುವ ಪಿ.ಎ. ಮೇಘಣ್ಣವರ ಬೆಳಗಾವಿ ಜಿಲ್ಲೆ ಚಿಕ್ಕೋಡಿಯವರು .1991ರ ಬ್ಯಾಚಿನ ಕೆ.ಎ.ಎಸ್ಅ ಧಿಕಾರಿಯಾಗಿರುವ ಇವರು ಜಿಲ್ಲೆಯ ವಿವಿಧೆಡೆ ಕಾರ್ಯ ನಿರ್ವಹಿಸಿದ್ದಾರೆ. ಬೈಲಹೊಂಗಲದಲ್ಲಿ ಉಪವಿಭಾಗಾ ಧಿಕಾರಿ, ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ, ಆಯುಕ್ತ, ಬುಡಾ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಅವರು, ಐಎಎಸ್‌ಗೆ ಬಡ್ತಿ ಪಡೆದ ನಂತರ ಅವರು ಧಾರವಾಡ ಜಿಲ್ಲಾ ಪಂಚಾಯ್ತಿಯ ಸಿಇಓ ಆಗಿದ್ದರು. ಇಲ್ಲಿಗೆ ಬರುವ ಮುಂಚೆ ಬಾಗಲಕೋಟೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry