ಮೂಡುಬಿದಿರೆ: ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಜನ್ಮದಿನದಂದೇ ಆತ್ಮಹತ್ಯೆ

7

ಮೂಡುಬಿದಿರೆ: ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಜನ್ಮದಿನದಂದೇ ಆತ್ಮಹತ್ಯೆ

Published:
Updated:
ಮೂಡುಬಿದಿರೆ: ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಜನ್ಮದಿನದಂದೇ ಆತ್ಮಹತ್ಯೆ

ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ವಿದ್ಯಾರ್ಥಿಯೊಬ್ಬ ಜನ್ಮದಿನದಂದೇ ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಬೆಂಗಳೂರಿನ ಅಬ್ಬಿಗೆರೆ ಮೂಲದ ತೇಜಸ್ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಡೆತ್‌ನೋಟ್ ಬರೆದಿಟ್ಟು, ಆಳ್ವಾಸ್ ಕ್ಯಾಂಪಸ್‌ನ ನಂದಿನಿ ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡಿದ್ದಾನೆ. 

ತೇಜಸ್ ತಾಯಿಯನ್ನು ಕಳೆದುಕೊಂಡಿದ್ದು, ಈ ನೋವಿನ ಬಗ್ಗೆ ಡೆತ್ ನೋಟ್‌ನಲ್ಲಿ ಬರೆದಿದ್ದಾನೆ. ತಂದೆಗೆ ಬೆನ್ನು ನೋವಿದ್ದು, ತೇಜಸ್ ಇದರಿಂದಲೂ ನೊಂದುಕೊಂಡಿದ್ದ. ಇದೀಗ ಪೊಲೀಸರು ಡೆತ್‌ನೋಟ್ ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ತೇಜಸ್ ತಾಯಿ ಈ ಹಿಂದೆಯೇ ಮೃತಪಟ್ಟಿ, ತಂದೆ ಹಾಗೂ ಎರಡನೇ ತಾಯಿ ಸೋಮವಾರ (ಇದೇ 8) ತೇಜಸ್‌ನನ್ನು ಭೇಟಿಯಾಗಿ ಮಾತನಾಡಿದ್ದರು. ಪೋಷಕರ ಜತೆ ತೇಜಸ್ ಜನ್ಮದಿನ ಆಚರಿಸಿದ್ದ. ಈ ವೇಳೆ ತಂದೆ ಬೆನ್ನು ನೋವಿನ ಬಗ್ಗೆ ತೇಜಸ್ ಬಳಿ ಹೇಳಿದ್ದು, ಇದರಿಂದ ನೊಂದುಕೊಂಡಿದ್ದ. ಸೋಮವಾರ ರಾತ್ರಿ 7.30ರ ಸುಮಾರಿಗೆ ತೇಜಸ್ ಹಾಸ್ಟೆಲ್‌ಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry