ಆದಿತ್ಯನಾಥ್‌ರ ಹಿಂದುತ್ವದ ಮಾತು ಜನರ ಕೋಮು ಭಾವನೆ ಪ್ರಚೋದಿಸುತ್ತದೆ: ಜಿ. ಪರಮೇಶ್ವರ್‌

7

ಆದಿತ್ಯನಾಥ್‌ರ ಹಿಂದುತ್ವದ ಮಾತು ಜನರ ಕೋಮು ಭಾವನೆ ಪ್ರಚೋದಿಸುತ್ತದೆ: ಜಿ. ಪರಮೇಶ್ವರ್‌

Published:
Updated:
ಆದಿತ್ಯನಾಥ್‌ರ ಹಿಂದುತ್ವದ ಮಾತು ಜನರ ಕೋಮು ಭಾವನೆ ಪ್ರಚೋದಿಸುತ್ತದೆ: ಜಿ. ಪರಮೇಶ್ವರ್‌

ಬೆಂಗಳೂರು: ‘ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಹಿಂದುತ್ವ, ಆಹಾರದ ಬಗ್ಗೆ ಮಾತನಾಡಿದ್ದಾರೆ. ಯಾವ ಉದ್ದೇಶಕ್ಕೆ ಮಾತನಾಡಿದ್ದೀರಿ. ಜನರನ್ನು ಕೋಮು ಭಾವನೆ, ಪ್ರಚೋದನೆಗೆ ತಳ್ಳಲು ಅಸ್ತ್ರವಾಗಿ ಮಾಡುತ್ತೀರಿ ಎಂಬುದು ನನ್ನ ಭಾವನೆ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಪ್ರತಿಕ್ರಿಯಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ವಾಮೀಜಿಗಳು, ಹೆಸರಿನ ಹಿಂದಿರುವ ಶ್ರೀ ಗೌರವದ ಸಂಕೇತ. ಬಹಳ ಗೌರವದಿಂದ, ಇವರಿಗೇನು ಕಾಣುತ್ತಿಲ್ಲ. ಶ್ರೀ ಯೋಗಿ ಆದಿತ್ಯನಾಥ್ ಎಂದು ಕರೆಯುತ್ತೇವೆ. ಅವರು ಬಿಜೆಪಿ ಸೇರಿದವರು, ಎಂಪಿಯಾಗಿ‌ ಸೇವೆ ಮಾಡಿದ್ದಾರೆ. ಆದರೆ, ಕರ್ನಾಟಕಕ್ಕೆ ಬರುತ್ತಿದ್ದಾರೆ. ಬಹಳ ಸಂತೋಷದಿಂದ ಸ್ವಾಗತಿಸುತ್ತೇವೆ. ಅವರ ಪಕ್ಷದ ಬಗ್ಗೆ ಬಿಜೆಪಿ ಸಿದ್ಧಾಂತದ ಬಗ್ಗೆ ಮಾತನಾಡಿದ್ದರೆ ತಕರಾರಿಲ್ಲ. ಇನ್ನೊಂದು ಸಿಎಂ ಆಡಳಿದ ಬಗ್ಗೆ ಮಾತನಾಡುವುದು ಸಂವಿಧಾನಕ್ಕೆ ವಿರುದ್ಧವಾದದ್ದು‘ ಎಂದು ಪರಮೇಶ್ವರ್‌ ಹೇಳಿದರು.

‘ಆಡಳಿತ ಸರಿ ಇಲ್ಲ ಎನ್ನುವುದು, ಟೀಕೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಸರಿ ಅಲ್ಲ. ನಮ್ಮ ಸಿಎಂ ಉತ್ತರಪ್ರದೇಶಕ್ಕೆ ಹೋದರೆ ಅಲ್ಲಿ ಆ ರೀತಿ ಮಾಡಬಾರದು’ ಎಂದರು.

‘ಉತ್ತರಪ್ರದೇಶದಲ್ಲಿ ಕ್ರೈಂ ರೇಟ್ ದೇಶದಲ್ಲಿ ಹೆಚ್ಚಿದೆ. ಗೋರಖ್‌ಪುರದಲ್ಲಿ ಆಮ್ಲಜನಕ ಕೊರತೆಯಿಂದ ಮಕ್ಕಳು ಮೃತಪಟ್ಟಿವೆ. ಈ ಸಂಬಂಧ ಚಾರ್ಜ್ ಶೀಟ್ ಆಗಿದೆ. ಆಸ್ಪತ್ರೆಗೆ ಸಂಬಂಧ ಪಟ್ಟ ಮಾಹಿತಿ ಇದ್ದ ದಾಖಲೆಗಳು ಸುಟ್ಟು ಹೋಗಿದೆ. ರೂಂನಲ್ಲಿ ಬೆಂಕಿ ಹತ್ತಿದೆ ಎಂದರೆ ಉದ್ದೇಶಪೂರ್ವಕ. ಇದು ನೀವು ಮಾಡುವ ಆಡಳಿತ’ ಎಂದು ಆದಿತ್ಯನಾಥ್‌ ಅವರ ಆಡಳಿತವನ್ನು ಪರಮೇಶ್ವರ್ ಟೀಕಿಸಿದರು.

‘ಟೀಕೆ ಸಲಹೆ ರೂಪದಲ್ಲಿ ಇದ್ದರೆ ತೆದುಕೊಳ್ಳುತ್ತೇವೆ. ನಮ್ಮದು ಪ್ರಗತಿ ಪರ ರಾಜ್ಯ. ಒಳ್ಳೆ ಆಡಳಿತ ಇದೆ ಎಂದರು.

‘ಯೋಗಿ ಆದಿತ್ಯನಾಥ್ ಅವರು ಹಿಂದುತ್ವದ, ಆಹಾರದ ಬಗ್ಗೆ ಮಾತನಾಡಿದ್ದಾರೆ. ಯಾವ ಉದ್ದೇಶಕ್ಕೆ ಮಾತನಾಡಿದ್ದೀರಿ, ಜನರನ್ನು ಕೋಮು ಭಾವನೆ, ಪ್ರಚೋದನೆಗೆ ತಳ್ಳಲು, ಅಸ್ತ್ರವಾಗಿ ಮಾಡುತ್ತೀರಿ ಎಂಬುದು ನನ್ನ ಭಾವನೆ’ ಎಂದು ಹೇಳಿದರು.

‘ಗೋಡ್ಸೆ, ವಿವೇಕಾನಂದ ಹಿಂದುತ್ವ ಮಾತನಾಡುತ್ತೀರಾ. ಹಾರ್ಡ್ ಹಿಂದುತ್ವ ಯಾವುದು? ಕೋಮುವಾದ, ಕೊಲೆ ಮಾಡಿಸೋದಾ? ಜನರಿಗೆ ಧರ್ಮದವರನ್ನು ಬೇರೆ ರೀತಿಯಲ್ಲಿ ಕಾಣುವಂತೆ ಮಾಡುವುದಾ’ ಎಂದು ಅವರು ಪ್ರಶ್ನಿಸಿದರು.

‘ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋಗಿದ್ದು ಅಪರಾಧವಾಗಿದೆಯೇ. ರಾಜೀವ್, ಇಂದಿರಾ ದೇವಸ್ಥಾನಕ್ಕೆ ಹೋಗಲಿಲ್ಲವೇ, ನಮ್ಮದು ಇನ್‌ಕ್ಲೂಸಿವ್ ಹಿಂದುತ್ವ. ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗುವ ಹಿಂದುತ್ವ. ನಿಮ್ಮದು ಯಾವ ಹಿಂದುತ್ವ? ಎಂದರು.

ಪರಮೇಶ್ವರ್ ಅವರ ಮಾತಿನ ಪೂರ್ಣ ಸಾರ ಇಲ್ಲಿದೆ...

‘ಹಿಂದುತ್ವದ ಕಸ್ಟೋಡಿಯನ್ ಕೊಟ್ಟಿದ್ದು ಯಾರು. ಯಾರೂ ಹಿಂದೂಗಳು ಇಲ್ಲವೇ? ಇದು ನಿರ್ಧಾರ ಆಗಬೇಕಾಗುತ್ತದೆ. ಉತ್ತರಪ್ರದೇಶ ಸಿಎಂ ಗೌರವಾನ್ವಿತರು, ಅವರು ಆಡುವ ಮಾತಿನ ಮೇಲೆ ಗಮನ ಇರಲಿ.

‘ನಮ್ಮಲ್ಲಿ ಯುಪಿಎ ಸರ್ಕಾರ ಇದ್ದಾಗ ಆಧಾರ್ ಕಾರ್ಡ್‌ ತರಲು ಹೊರಟಿತು. ಸಾಕಷ್ಟು ಚರ್ಚೆ ಮಾಡಿ ಒಂದು ಗುರುತಿನ ವ್ಯವಸ್ಥೆಯಾಗಬೇಕೆಂದು ಚರ್ಚೆ ಆಯಿತು. ದುಡ್ಡು ಹೊಡೆಯಲು ಮಾಡಿದ್ದು ಎಂದು ಬಿಜೆಪಿಯವರು ಟೀಕಿಸಿದ್ದರು. ಆಧಾರ್ ಮಾಹಿತಿಯನ್ನು ಇನ್ಯಾರಿಗೋ ಕೊಡುವುದು ಸರಿಯೇ? ಸಲಹೆ ಕೊಟ್ಟ ಪತ್ರಕರ್ತೆ ರಚನಾ ಮೇಲೆ ಎಫ್ಐಆರ್ ಹಾಕಿದ್ದೀರಾ, ಸರಿಯೇ? ಖಾಸಗಿಯವರಿಗೆ ಹೊರ ಗುತ್ತಿಗೆ ಕೊಟ್ಟಿದ್ದಾರೆ. ಅವರು ಮಾರಾಟ ಮಾಡುತ್ತಿದ್ದಾರೆ. ಅದನ್ನು ಕೇಂದ್ರ ನಿಲ್ಲಿಸಬೇಕು. ವೈಯಕ್ತಿಕ ದಾಖಲೆ ಸೋರಿಕೆಯಾಗದಿರಲಿ ಎಂದರು.

‘ಗೋ ಹತ್ಯೆ ನಿಷೇಧ ಹಿಂದಿನಿಂದಲೂ ಇದೆ. ಅಗತ್ಯ ಇದ್ದಾಗ ತಿದ್ದುಪಡಿ ಮಾಡಿದ್ದಾರೆ. ದಾಳಿ ಮಾಡೋದು ತಪ್ಪು ನಮಗೆ ಇರುವ ಕನ್ಸರ್ನ್.

‘ರೈತರ ಆತ್ಮಹತ್ಯೆಮಾಡಿಕೊಂಡಿದ್ದಾರೆ. ಪ್ರಧಾನಿಗೆ ಹೇಳಿ ಸಾಲ ಮನ್ನ ಮಾಡಿಸಲಿ. ಪ್ರಧಾನಿಗೆ ಆತ್ಮೀಯರು. ಅದನ್ನು ಮಾಡಿಸಲಿ ಎಂದರು.

‘ಹತ್ತಾರು ಕೇಸ್‌ನಲ್ಲಿ ಹೆಣ ಇಟ್ಟು ರಾಜಕೀಯ ಮಾಡುತ್ತಿದ್ದಾರೆ. ಪ್ರಚೋದನೆಯೇ ಮೂಲ ಅಸ್ತ್ರ. ಐದು ವರ್ಷದ ಸಾಧನೆ ಹೇಳಬಹುದಲ್ವ. ಮುಂದೇನು ಮಾಡುತ್ತೇವೆಂದು ಹೇಳುತ್ತಿಲ್ಲ. ಪರಿವರ್ತನಾ ಯಾತ್ರೆಯಲ್ಲಿ ಇದೆಲ್ಲ ಹೇಳುತ್ತಿಲ್ಲ. ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ.

‘ದೀಪಕ್ ರಾವ್ ಹತ್ಯೆ ಕೊಲೆಗೆ ಜೆಡಿಎಸ್ ರಾಜ್ಯ ಅಧ್ಯಕ್ಷರು, ಸಿಎಂ ಆದವರು ಹೇಳುತ್ತಾರೆಂದು ಸಂಶಯ ಪಡಬೇಕಲ್ಲ. ಗೃಹ ಇಲಾಖೆಗೆ ಸಿಗದ ಮಾಹಿತಿ ಕುಮಾರಸ್ವಾಮಿಯವರಿಗೆ ಸಿಕ್ಕಿದ ಮಾಹಿತಿ ಏನು? ಎಂದು ಪರಮೇಶ್ವರ್‌ ಪ್ರಶ್ನಿಸಿದರು.

ನಾವು ಎರಡು ಭಾಗ ಮಾಡಿಕೊಂಡು...

ಈಗಾಗಲೇ ಚುನಾವಣೆ ಕಾವು ಆರಂಭವಾಗುತ್ತಿದೆ. ಏಪ್ರಿಲ್, ಮೇನಲ್ಲಿ ಚುನಾವಣೆ ನಡೆಯುವುದು. ಸ್ವಾಭಾವಿಕವಾಗಿ ತಯಾರಿ ನಡೆದಿದೆ. ನಾವು ಎರಡು ಭಾಗ ಮಾಡಿಕೊಂಡು, ಸಿಎಂ ಒಂದು ಕಡೆಯಿಂದ ಸರ್ಕಾರದ ಕಾರ್ಯಕ್ರಮಗಳು, ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆಂದು ಪ್ರಚಾರ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದಾರೆ‌. ಕೆಪಿಸಿಸಿಯಿಂದ ಇನ್ನೊಂದು ತಂಡ ನೂರು ಕ್ಷೇತ್ರದಲ್ಲಿ ಮುಖಂಡರು ಪ್ರಾರಂಭ ಮಾಡಿದ್ದೇವೆ. ಹದಿನೆಂಟು ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದೆ. ಫೆಬ್ರವರಿ ಮೊದಲಿಗೆ ನೂರು ಕ್ಷೇತ್ರದಲ್ಲಿ ಪ್ರಚಾರ ಮುಗಿಯಲಿದೆ. ನಾವು ಹೋದ ಕ್ಷೇತ್ರಗಳಲ್ಲಿ ಜನರ ಪ್ರತಿಕ್ರಿಯೆ, ಸ್ಪಂದನೆ ಕಾಂಗ್ರೆಸ್ ಪರವಾಗಿದೆ. ನಾವು ಹಣ ಕೊಟ್ಟು ಕರೆತಂದಿಲ್ಲ ಎಂದರು.

‘ಮೇಲುನೋಟಕ್ಕೆ ಆ ಕ್ಷೇತ್ರ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಪಕ್ಷ ಇನ್ನೂ ಕೂಡ ಹೆಚ್ಚು ಸಂಘಟನೆ ಆಗಬೇಕಾದ ಕ್ಷೇತ್ರ ಗುರುತಿಸುತ್ತಿದ್ದೇವೆ. ಸರ್ಕಾರದ ಸಾಧನೆಗಳನ್ನು ಅಂಕಿಅಂಶಗಳ ಕೊಡುವ ಮೂಲಕ ಜನರಿಗೆ ತಿಳಿಸುತ್ತಿದ್ದೇವೆ. 1.10 ಕೋಟಿ ಪುಸ್ತಕ ಮನೆಗೆ ತಲುಪಿಸಿದ್ದೇವೆ. ಕ್ಷೇತ್ರಕ್ಕೇನು ಮಾಡಿದ್ದೇವೆಂದು ತಿಳಿಸುತ್ತಿದ್ದೇವೆ.

‘ಸಿಎಂ ಅಡಿಗಲ್ಲು, ಶಂಕುಸ್ಥಾಪನೆ ಮಾಡಿ ಬರುತ್ತಿದ್ದಾರೆ. ಪಕ್ಷದ ಕೆಲಸವನ್ನೂ ಮಾಡುತ್ತಿದ್ದಾರೆ. ವಾಸ್ತವ್ಯ ಹೂಡಿದಾಗ ಅಲ್ಲಿ ಸಮಸ್ಯೆ ಭಿನ್ನಾಭಿಪ್ರಾಯ ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಯಾರಿಗೆ ಜನ ಮನ್ನಣೆ ಇದೆ ಎಂದು ಅರಿಯುತ್ತಿದ್ದೇವೆ, ಅಲ್ಲಿ ಮುಕ್ತವಾಗಿ ಹೇಳದೇ ಇರಬಹುದು ಆದರೆ ಅಭ್ಯರ್ಥಿ ಪರಾಮರ್ಶೆ ಮಾಡುತ್ತಿದ್ದೇವೆ.

‘ವಿರೋಧಿ ಅಲೆ ಇದೆಯೇ ಎಂದು ಗಮನಿಸುತ್ತಿದ್ದೇವೆ. ಸರ್ವೆ ರಿಪೋರ್ಟ್, ಮುಖಂಡರ ಅಭಿಪ್ರಾಯ ಪಡೆಯುತ್ತಿದ್ದೇವೆ’ ಎಂದು ಪರಮೇಶ್ವರ್ ವಿವರ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry