ದ್ರಾಕ್ಷಿ ಕೆ.ಜಿ.ಗೆ ₹ 20 ಇಳಿಕೆ

7

ದ್ರಾಕ್ಷಿ ಕೆ.ಜಿ.ಗೆ ₹ 20 ಇಳಿಕೆ

Published:
Updated:
ದ್ರಾಕ್ಷಿ ಕೆ.ಜಿ.ಗೆ ₹ 20 ಇಳಿಕೆ

ಹಾಸನ: ವಾರದ ಹಿಂದೆ ಮಾರುಕಟ್ಟೆಯಲ್ಲಿ ಕೆ.ಜಿ. ₹ 100ಕ್ಕೆ ಮಾರಾಟವಾಗುತ್ತಿದ್ದ ದ್ರಾಕ್ಷಿಹಣ್ಣು ಈ ವಾರ ₹ 80ಕ್ಕೆ ಮಾರಾಟವಾಗುತ್ತಿದೆ. ಹೊಸದುರ್ಗದಿಂದ ಹಾಸನ ಮಾರುಕಟ್ಟೆಗೆ ದ್ರಾಕ್ಷಿ ಹಣ್ಣು ಬರುತ್ತದೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವ ಕಾರಣ ಬೆಲೆ ಇಳಿಕೆಯಾಗಿದೆ. ಇದರಿಂದಾಗಿ ಹಣ್ಣು ಪ್ರಿಯರಿಗೆ ಸಂತಸವಾಗಿದೆ.

ಇನ್ನು ದಾಳಿಂಬೆ ಕೂಡ ಕೆ.ಜಿ ಗೆ ₹ 20 ಇಳಿಕೆಯಾಗಿದೆ. ಕಳೆದ ವಾರ ₹ 100ಕ್ಕೆ ಮಾರಾಟವಾಗುತ್ತಿದ್ದ ದಾಳಿಂಬೆ, ಈ ವಾರ ₹ 80ಕ್ಕೆ ಬಂದಿದೆ. ‘ಮಹಾರಾಷ್ಟ್ರದಿಂದ ಹಾಸನ ಮಾರುಕಟ್ಟೆಗೆ ದಾಳಿಂಬೆ ಆಮದು ಮಾಡಿಕೊಳ್ಳಲಾಗುತ್ತದೆ. ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳು ಬರುತ್ತಿರುವ ಕಾರಣ ದರದಲ್ಲಿ ಸ್ವಲ್ಪ ಇಳಿಕೆಯಾಗಿದೆ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಸಫಿ.

ಟೊಮೆಟೊ ಬೆಲೆ ಅರ್ಧದಷ್ಟು ಕುಸಿತವಾಗಿದೆ. ಕೆ.ಜಿ. ₹ 10 ಇದ್ದದ್ದು, ₹5ಕ್ಕೆ ಇಳಿದಿದೆ. ಈರುಳ್ಳಿ ಬೆಲೆ ಈ ವಾರ ₹ 10 ಏರಿಕೆಯಾಗಿ, ಕೆ.ಜಿ ₹ 50ಕ್ಕೆ ಮಾರಾಟವಾಗುತ್ತಿದೆ. ಉಳಿದಂತೆ ಬೀನ್ಸ್‌ಕೆ.ಜಿ.ಗೆ ₹ 40, ಆಲೂಗೆಡ್ಡೆ ₹ 20, ಕ್ಯಾರೆಟ್ ₹ 60, ಹಾಗಲಕಾಯಿ ₹ 40, ದಪ್ಪ ಮೆಣಸಿನ ಕಾಯಿ ₹ 60, ನುಗ್ಗೇಕಾಯಿ ಕೆ.ಜಿ

₹ 100 ರಂತೆ ಮಾರಾಟವಾಗುತ್ತಿದೆ. ಕೊತ್ತಂಬರಿ, ಪಾಲಾಕ್, ಲಾಳಿ, ಕರಿಬೇವು ಮತ್ತು ದಂಟು ಸೊಪ್ಪು ಕಂತೆಗೆ ₹ 10 ರಂತೆ ಲಭ್ಯ ಇದೆ.

ಮೂಸಂಬೆ ಕೆ.ಜಿ ಗೆ ₹ 80, ಬಾಳೆಹಣ್ಣು ₹ 70, ಸೇಬು ₹ 100, ಸೀತಾಫಲ ₹ 100, ಕಿತ್ತಳೆಹಣ್ಣು ₹ 60, ಅನಾನಸ್ ₹ 100, ಪಪ್ಪಾಯ ಮತ್ತು ಕಲ್ಲಂಗಡಿ ಹಣ್ಣು ₹ 30, ಸಪೋಟ ಕೆ.ಜಿ.ಗೆ ₹ 100ಕ್ಕೆ ಮಾರಾಟವಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry