ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೀಪನ ಮದ್ದು ಸೇವಿಸಿದ ಆರೋಪ: ಕ್ರಿಕೆಟಿಗ ಯೂಸಫ್ ಪಠಾಣ್‍ಗೆ 5 ತಿಂಗಳ ಕಾಲ ನಿಷೇಧ

Last Updated 9 ಜನವರಿ 2018, 10:31 IST
ಅಕ್ಷರ ಗಾತ್ರ

ಮುಂಬೈ: ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಕ್ರಿಕೆಟಿಗ ಯೂಸಫ್ ಪಠಾಣ್‍ಗೆ ಬಿಸಿಸಿಐ 5 ತಿಂಗಳ ಕಾಲ ನಿಷೇಧ ವಿಧಿಸಿರುವುದಾಗಿ ಹೇಳಿದೆ. ಹೊಡೆಬಡಿ ದಾಂಡಿಗ, ಆಲ್ ರೌಂಡರ್ ಆಗಿರುವ ಯೂಸಫ್ ಪಠಾಣ್‍ ಐದು ತಿಂಗಳುಗಳ ಕಾಲ ಅಂತರರಾಷ್ಟ್ರೀಯ, ದೇಶಿಯ ಪಂದ್ಯಗಳನ್ನು ಆಡುವಂತಿಲ್ಲ. ಅದೇ ವೇಳೆ ಬರೋಡಾ ತಂಡದಲ್ಲಿಯೂ ಪಠಾಣ್ ಆಡುವಂತಿಲ್ಲ ಎಂದು ಬಿಸಿಸಿಐ ಹೇಳಿದೆ. ಆದಾಗ್ಯೂ ಕಳೆದ ವರ್ಷ ಆಗಸ್ಟ್ 15ರಂದು ಆರಂಭವಾದ ನಿಷೇಧ ಅವಧಿಯು ಜನವರಿ 14ಕ್ಕೆ ಕೊನೆಗೊಳ್ಳಲಿದೆ. ಹಾಗಾಗಿ ಪಠಾಣ್ ಅವರು ಐಪಿಎಲ್‍ನಲ್ಲಿ ಆಡುವ ಅವಕಾಶ ಕಳೆದುಕೊಳ್ಳುವುದಿಲ್ಲ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಟಿ20 ಪಂದ್ಯದ ವೇಳೆ ನಡೆದ ಡೋಪಿಂಗ್ ಪರೀಕ್ಷೆಯಲ್ಲಿ ಪಠಾಣ್ ಉದ್ದೀಪನ ಮದ್ದು ಸೇವಿಸಿದ ವಿಷಯ ಬೆಳಕಿಗೆ ಬಂದಿತ್ತು. ಉದ್ದೀಪನ ಮದ್ದು ಸೇವನೆ ಪರೀಕ್ಷೆಗೊಳಪಡಿಸಿದಾಗ ಕೆಮ್ಮು ಔಷಧಿಯಲ್ಲಿದ್ದ  ಟೆರ್‍‍ಬ್ಯುಟಲೈನ್  (Terbutaline) ಎಂಬ ಪದಾರ್ಥ ಪಠಾಣ್ ಮೂತ್ರದಲ್ಲಿ ಕಂಡು ಬಂದಿತ್ತು ಎಂದು ಬಿಸಿಸಿಐ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT