ಚಾಲಕನಿಲ್ಲದ ಕಾರು ಸವಾಲುಗಳೇನು?

7

ಚಾಲಕನಿಲ್ಲದ ಕಾರು ಸವಾಲುಗಳೇನು?

Published:
Updated:
ಚಾಲಕನಿಲ್ಲದ ಕಾರು ಸವಾಲುಗಳೇನು?

ತಂತ್ರಜ್ಞಾನದಲ್ಲಿನ ಬದಲಾವಣೆಯೊಂದಿಗೆ ಸಮೂಹ ಸಾರಿಗೆ ವ್ಯವಸ್ಥೆಯೂ ಬದಲಾಗುತ್ತಿದೆ. ಸಾರಿಗೆ ವಾಹನಗಳಿಂದ ವಾಯುಮಾಲಿನ್ಯ ಹೆಚ್ಚಳವಾಗುತ್ತಿರುವುದು ಮುಂದುವರಿದ ದೇಶಗಳನ್ನೂ ಕಾಡುತ್ತಿದೆ. ನವೀಕರಿಸಬಹುದಾದ ಇಂಧನ ಮತ್ತು ಕಡಿಮೆ ಮಾಲಿನ್ಯ ಇಲ್ಲವೇ ಮಾಲಿನ್ಯವೇ ಸೃಷ್ಟಿಯಾಗದ ವಾಹನಗಳ ತಯಾರಿಕೆ ಕಡೆಗೆ ಆಸಕ್ತಿ ಹೆಚ್ಚುತ್ತಿದೆ. ಇದರಿಂದಾಗಿಯೇ ಡೀಸೆಲ್‌ ಮತ್ತು ಪೆಟ್ರೋಲ್‌ ಚಾಲಿತ ವಾಹನಗಳನ್ನು ಆದಷ್ಟು ಕಡಿಮೆ ಮಾಡಲು ಕೆಲವು ದೇಶಗಳು ಮುಂದಾಗಿವೆ.

ಹೆಚ್ಚಿನ ಜನಸಾಂದ್ರತೆ ಇರುವ ನಗರಗಳಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇಂತಹ ಕಡೆಗಳಲ್ಲಿ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಬದಲಾಗಬೇಕು ಎನ್ನುತ್ತಾರೆ ಲಂಡನ್‌ನ ಯೂನಿವರ್ಸಿಟಿ ಕಾಲೇಜಿನ ಸಾರಿಗೆ ಅಧ್ಯಯನ ಕೇಂದ್ರದ ಡೇವಿಡ್‌ ಮೆಟ್ಜ್‌.

ನಗರದ ಹೃದಯ ಭಾಗದಲ್ಲಿ ಕಾರುಗಳ ಸಂಚಾರವನ್ನು ಆದಷ್ಟು ನಿಯಂತ್ರಿಸಬೇಕು ಎನ್ನುತ್ತಾರೆ ಇವರು. ಸಂಚಾರವಿಲ್ಲದ ಕಾರುಗಳು ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ಏಕೆ ನಿಲ್ಲಿಸಬೇಕು. ಜನ ಕಾರ್‌ಪೂಲ್‌ ಸೌಲಭ್ಯಗಳನ್ನು ಬಳಸಿಕೊಳ್ಳಬಹುದಲ್ಲ ಎಂಬ ಸಲಹೆಯನ್ನೂ ಇವರು ನೀಡುತ್ತಾರೆ.

ಚಾಲಕರಹಿತ ಕಾರುಗಳು ನಗರ ಪ್ರದೇಶಗಳಲ್ಲಿ ಕ್ರಾಂತಿ ಉಂಟು ಮಾಡಬಲ್ಲವು. ಇತ್ತೀಚೆಗೆ ಗೂಗಲ್‌ ಸೇರಿದಂತೆ ಹಲವು ವಾಹನ ತಯಾರಿಕಾ ದೈತ್ಯ ಕಂಪನಿಗಳು ಚಾಲಕರಹಿತ ಕಾರುಗಳನ್ನು ತಯಾರಿಸಿ ಪ್ರಯೋಗಕ್ಕೆ ಮುಂದಾಗಿವೆ. ಭವಿಷ್ಯದಲ್ಲಿ ಚಾಲಕರಹಿತ ಕಾರುಗಳ ಮಾರುಕಟ್ಟೆ ದೊಡ್ಡದಾಗಿ ಬೆಳೆಯಬಹುದು. ಚಾಲಕರಹಿತ ಕಾರುಗಳ ಬಗ್ಗೆ ಜನರಲ್ಲಿರುವ ಭಯ ಮೊದಲು ನಿವಾರಣೆಯಾಗಬೇಕು ಎನ್ನುತ್ತಾರೆ ಸಂಶೋಧಕರೊಬ್ಬರು.

‘ಹೊಸ ನಗರಗಳಲ್ಲಿ ಎಲ್ಲ ವಾಹನಗಳು ಅವು ಎಲೆಕ್ಟ್ರಿಕ್‌ ಇಲ್ಲವೇ ಚಾಲಕರಹಿತ ಆಗಿರಬಹುದು. ಆದರೆ, ಅವು ಸಾರ್ವಜನಿಕರ ಬಳಕೆಗೆ ಸಿಗುವಂತಿರಬೇಕು’ ಎನ್ನುತ್ತಾರೆ ವಾಹನಗಳಿಗೆ ತಂತ್ರಾಂಶ ಅಭಿವೃದ್ಧಿಪಡಿಸುವ ಬ್ರಿಟನ್ನಿನ ಆಕ್ಸ್‌ಬೋಟಿಕಾದ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಗ್ರೆಮೆ ಸ್ಮಿತ್. ‘ಹೊಸ ನಗರಗಳಲ್ಲಿ ಜನ ಸಂಚಾರದ ಬದುಕು ವಿಭಿನ್ನವಾಗಿರಬೇಕು. ಮುಂದಿನ 50 ವರ್ಷಗಳಲ್ಲಿ ಸಮೂಹ ಸಾರಿಗೆ ವ್ಯವಸ್ಥೆ ಬದಲಾಗಬೇಕು’ ಎಂಬ ಅಭಿಪ್ರಾಯ ಇವರದು.

ಚಾಲಕನಿಲ್ಲದ ವಾಹನಗಳು ಸವಾಲಿನಿಂದ ಕೂಡಿವೆ. ಆದರೆ, ಅವುಗಳ ಅಳವಡಿಕೆ ತಂತ್ರಜ್ಞಾನ ಇನ್ನಷ್ಟು ಸುಧಾರಿಸಬೇಕು. ಇವುಗಳ ಕಾರ್ಯನಿರ್ವಹಣಾ ವಿಧಾನಕ್ಕೆ ನಿಯಮಗಳಿಲ್ಲ. ಈ ಬಗ್ಗೆ ಇನ್ನಷ್ಟೇ ನಿಯಮ ರೂಪಿಸಬೇಕಾಗಿದೆ.

2021ರ ಹೊತ್ತಿಗೆ ಬ್ರಿಟನ್‌ನಲ್ಲಿ ಮೊದಲ ಹಂತದ ಸ್ವಯಂಚಾಲಿತ ಕಾರುಗಳು ಬರಲಿವೆ ಎಂದು ಅಲ್ಲಿನ ಸಾರಿಗೆ ಕಾರ್ಯದರ್ಶಿ ಕ್ರಿಸ್‌ ಗೇಲಿಂಗ್ ಭವಿಷ್ಯ ನುಡಿದಿದ್ದಾರೆ. ಚಾಲಕನಿಲ್ಲದ ಕಾರುಗಳು ನಗರದ ಸಂಚಾರ ದಟ್ಟಣೆ ಸಮಸ್ಯೆಯನ್ನು ಗಮನಾರ್ಹವಾಗಿ ಪರಿಹರಿಸಬಲ್ಲವು ಎಂಬ ಆಶಾಭಾವನೆ ಇದೆ.

2019 ರ ಹೊತ್ತಿಗೆ ಕಡಿಮೆ ಮಾಲಿನ್ಯ ಹೊರಸೂಸುವಿಕೆ ವಲಯಗಳನ್ನು ಪರಿಚಯಿಸಲೂ ಬ್ರಿಟನ್‌ ಮುಂದಾಗಿದೆ. ಇಲ್ಲಿ ಹೆಚ್ಚಿನ ಮಾಲಿನ್ಯಕಾರಕ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ. ಈ ವಲಯವನ್ನು 2021 ರ ಹೊತ್ತಿಗೆ ಲಂಡನ್‌ ಹೃದಯಭಾಗದಲ್ಲೂ ಆರಂಭಿಸಲಾಗುತ್ತದೆ. ಆದರೆ, ಇದಕ್ಕೆ ಅನೇಕ ಸವಾಲುಗಳೂ ಎದುರಾಗಲಿವೆ.

ನಾರ್ವೆ ಸೇರಿದಂತೆ ವಿಶ್ವದ ಹಲವು ದೇಶಗಳು ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಹೆಚ್ಚಿಸಲು ಮುಂದಾಗಿವೆ. ಇದಕ್ಕಾಗಿ ಚಾರ್ಜಿಂಗ್‌ ಕೇಂದ್ರಗಳನ್ನೂ ಸ್ಥಾಪಿಸಲಾಗುತ್ತದೆ.  ನಗರದ ರಸ್ತೆಗಳ ಅಡಿಯಲ್ಲಿ ಚಾರ್ಜಿಂಗ್‌ ಪ್ಯಾಡ್‌ಗಳನ್ನು ಅಳವಡಿಸಲಾಗುತ್ತದೆ.

ಆದರೆ ಈ ವಿದ್ಯುತ್‌ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದೂ ಸಹ  ಒಂದಷ್ಟು ತೊಂದರೆಯಿಂದ ಕೂಡಿದೆ. ಎಲೆಕ್ಟ್ರಿಕ್‌ ಕಾರು ಬಳಸಲು ಲಂಡನ್‌ ಅತಿ ಉತ್ತಮ ಸ್ಥಳ. ಆದರೆ ಇಲ್ಲಿಯೂ  ಚಾರ್ಜಿಂಗ್‌ ಕೇಂದ್ರಗಳ ಕೊರತೆ ಇದೆ ಎನ್ನುತ್ತಾರೆ ವಾಹನ ಸವಾರರೊಬ್ಬರು.

ಎಲೆಕ್ಟ್ರಿಕ್‌ ಚಾರ್ಜಿಂಗ್‌ ಸ್ಟೇಷನ್‌

ದೇಶದ ಮೊದಲ ವಿದ್ಯುತ್‌ ಚಾಲಿತ ವಾಹನ ಚಾರ್ಜಿಂಗ್‌ ಸ್ಟೇಷನ್‌ ಅನ್ನು ನಾಗ‍ಪುರದ ಪೆಟ್ರೋಲ್‌ ಪಂಪ್‌ನಲ್ಲಿ ಆರಂಭಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮದ (ಐಒಸಿ) ಪೆಟ್ರೋಲ್‌ ಪಂಪ್‌ನಲ್ಲಿ ಒಲಾ ಕಂಪೆನಿ ಸಹಭಾಗಿತ್ವದಲ್ಲಿ ಇದನ್ನು ಸ್ಥಾಪಿಸಲಾಗಿದೆ.

ಭಾರತದಲ್ಲೇ ಮೊದಲ ಬಾರಿಗೆ ವಿದ್ಯುತ್‌ ಚಾಲಿತ ಸಾರ್ವಜನಿಕ ಸಾರಿಗೆ ಪದ್ಧತಿಯನ್ನು ಪರಿಚಯಿಸಿದ ಕೀರ್ತಿಯೂ ನಾಗಪುರಕ್ಕಿದೆ.

ತೈಲ ಸಂಸ್ಕರಣೆ ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿ ದೇಶದ ಪ್ರಮುಖ ಕಂಪನಿ ಎಂದೇ ಗುರುತಿಸಿಕೊಂಡಿರುವ ಐಒಸಿ, ಇದೀಗ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಘಟಕ ಆರಂಭದ ಮೂಲಕ ಜೈವಿಕ ಸ್ಥಿರತೆ ಹಾಗೂ ಪರಿಸರ ಮಾಲಿನ್ಯ ತಡೆಗೂ ಕೊಡುಗೆ ನೀಡಿದೆ. ಮುಂದಿನ ದಿನಗಳಲ್ಲಿ ಭಾರತದ ಸಂಚಾರ ವ್ಯವಸ್ಥೆಯನ್ನು ಗಮನದಲ್ಲಿ ಇಟ್ಟುಕೊಂಡು  ಇದನ್ನು ಕಾರ್ಯರೂಪಕ್ಕೆ ತಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry