ಗುರುಗ್ರಾಮದಲ್ಲಿದೆ ಸಾಕುಪ್ರಾಣಿಗಳ ಐಷಾರಾಮಿ ಹೋಟೆಲ್‌.

7

ಗುರುಗ್ರಾಮದಲ್ಲಿದೆ ಸಾಕುಪ್ರಾಣಿಗಳ ಐಷಾರಾಮಿ ಹೋಟೆಲ್‌.

Published:
Updated:
ಗುರುಗ್ರಾಮದಲ್ಲಿದೆ ಸಾಕುಪ್ರಾಣಿಗಳ ಐಷಾರಾಮಿ ಹೋಟೆಲ್‌.

‘ಗುರುಗ್ರಾಮ’ದಲ್ಲಿ ಸಾಕುಪ್ರಾಣಿಗಳ ಐಷಾರಾಮಿ ಪಂಚತಾರಾ ಹೋಟೆಲ್‌ ಒಂದು ನಿರ್ಮಾಣಗೊಂಡಿದೆ.

12 ಸಾವಿರ ಚದರ ಅಡಿಯ ಆರು ಮಹಡಿಗಳಲ್ಲಿ ಈ ಹೋಟೆಲ್ ಇದೆ. ಒಟ್ಟು 42 ಸಿಬ್ಬಂದಿ ಇದ್ದಾರೆ. 26 ಕೊಠಡಿಗಳಿರುವ ಈ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ಒಂದು ದಿನಕ್ಕೆ ₹999ರಿಂದ ಬಾಡಿಗೆ ಆರಂಭ. ಗರಿಷ್ಠ ಬಾಡಿಗೆ ₹4,400 (ಆಹಾರ ಮತ್ತು ತೆರಿಗೆಗಳನ್ನು ಒಳಗೊಂಡಿರುತ್ತದೆ).

ನಾಯಿಗಳು ಮತ್ತು ಇತರ ಸಾಕುಪ್ರಾಣಿಗಳು ಆಹಾರ ತಿನ್ನಲೆಂದೇ ಪ್ರತ್ಯೇಕವಾದ ಕೊಠಡಿಗಳು ಇಲ್ಲಿವೆ. ರೆಸ್ಟೊರೆಂಟ್, ಸಲೂನ್ ಮತ್ತು ಪ‍್ರತಿ ಕೋಣೆಗಳಿಗೆ 24 ಗಂಟೆಗಳ ವೈದ್ಯಕೀಯ ಸೌಲಭ್ಯಗಳು ಲಭ್ಯ. ಸಾಕುನಾಯಿಗಳಿಗಾಗಿ ಸಲೂನ್‌, ವಿಶಿಷ್ಟ ಹಾಸಿಗೆಗಳು, ಟಿವಿ, ಪ್ರೈವೆಟ್‌ ಬಾಲ್ಕನಿ ಮತ್ತು ಈಜುಕೊಳದ ಸೌಕರ್ಯ ಇದೆ. ನಾಯಿಗಳಿಗೆ ಮಸಾಜ್‌ ಸಹ ಲಭ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry