ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಕೋಟಿ ಕಳ್ಳಸಾಗಣೆ : ಜೆಟ್‌ ಏರ್‌ವೇಸ್‌ ಸಿಬ್ಬಂದಿ ಬಂಧನ

Last Updated 9 ಜನವರಿ 2018, 12:24 IST
ಅಕ್ಷರ ಗಾತ್ರ

ನವದೆಹಲಿ : ಹಾಂಗ್‌ಕಾಂಗ್‌ನ ವಿಮಾನದಲ್ಲಿ ₹ 3.21 ಕೋಟಿ ಮೊತ್ತದ ಯು.ಎಸ್‌.ಡಾಲರ್‌ ಸಾಗಿಸುತ್ತಿದ್ದ ಆರೋಪದ ಮೇರೆಗೆ ಮಹಿಳಾ ಸಿಬ್ಬಂದಿಯನ್ನು ಆದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಇಲ್ಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಜನವರಿ 8ರ ರಾತ್ರಿಯ ಯಾನದಲ್ಲಿ ನಡೆದ ಈ ಮೊತ್ತದ ಕಳ್ಳಸಾಗಣೆಯಲ್ಲಿ ಅಮಿತ್‌ ಎಂಬ ಪರಿಚಾರಕನ ಪಾತ್ರವೂ ಇದೆ ಎಂದು ಗೊತ್ತಾಗಿದ್ದು, ತನಿಖೆ ನಡೆಯುತ್ತಿದೆ.

ಸಿಬ್ಬಂದಿಯು ಕಳ್ಳಸಾಗಣೆ ಜಾಲದಲ್ಲಿ ಶಾಮಿಲಾಗಿದ್ದು, ಕಪ್ಪು ಹಣವನ್ನು ಬೇರೆ ದೇಶದಲ್ಲಿ ಬದಲಾಯಿಸಿ ಚಿನ್ನವಾಗಿಸಲು ನೆರವಾಗುತ್ತಿದ್ದಳು. ಹಣ ಸಾಗಿಸಲಿಕ್ಕಾಗಿ ಪರಿಚಾರಕನೊಂದಿಗೆ ಸ್ನೇಹ ಬೆಳೆಸಿದ್ದಳು. ಸಾಗಿಸುವ ಮೊತ್ತದಲ್ಲಿ ಶೇ 1 ರಷ್ಟು ಕಮೀಷನ್‌ ಪಡೆಯುತ್ತಿದ್ದಳು. ಮೂರು ತಿಂಗಳಲ್ಲಿ ಹಾಂಗ್‌ಕಾಂಗ್‌ಗೆ ಬೆಳೆಸಿದ 7 ಟ್ರಿಪ್‌ಗಳಲ್ಲಿ ಸುಮಾರು 10 ಲಕ್ಷ ಯು.ಎಸ್‌.ಡಾಲರ್‌ ಸಾಗಿಸಿದ್ದಾಳೆ ಎನ್ನಲಾಗುತ್ತಿದೆ.

ವಿಮಾನ ನಿಲ್ದಾಣಗಳಲ್ಲಿನ ಸ್ಕ್ಯಾನರ್‌ಗಳ ಕಣ್ಣುತ್ತಪ್ಪಿಸಿ ಹಣ ಸಾಗಿಸಲು, ನೋಟಿನ ಕಂತೆಗಳನ್ನು ಫೂಯಲ್‌ ಕಾಗದದಲ್ಲಿ ಸುತ್ತುತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT