ಜಂಟಿ ಸೇನಾ ಸಮಾಲೋಚನೆ: ಉ.ಕೊರಿಯಾ, ದ.ಕೊರಿಯಾ ಸಮ್ಮತಿ

7

ಜಂಟಿ ಸೇನಾ ಸಮಾಲೋಚನೆ: ಉ.ಕೊರಿಯಾ, ದ.ಕೊರಿಯಾ ಸಮ್ಮತಿ

Published:
Updated:
ಜಂಟಿ ಸೇನಾ ಸಮಾಲೋಚನೆ: ಉ.ಕೊರಿಯಾ, ದ.ಕೊರಿಯಾ ಸಮ್ಮತಿ

ಸೋಲ್‌: ಜಂಟಿ ಸೇನಾ ಸಮಾಲೋಚನೆ ನಡೆಸಲು ಉತ್ತರ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳು ಸಮ್ಮತಿಸಿವೆ. ಎರಡು ವರ್ಷಕ್ಕೂ ಹೆಚ್ಚು ಸಮಯದ ಬಳಿಕ ಇದೇ ಮೊದಲ ಬಾರಿಗೆ ಉಭಯ ರಾಷ್ಟ್ರಗಳ ಪ್ರತಿನಿಧಿಗಳ ನಡುವೆ ಮಂಗಳವಾರ ಅಧಿಕೃತ ಮಾತುಕತೆ ನಡೆದಿದೆ.

ದಕ್ಷಿಣ ಕೊರಿಯಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಉತ್ತರ ಕೊರಿಯಾ ಅಥ್ಲೀಟ್‌ಗಳು, ಉತ್ತೇಜನ ನೀಡುವ ತಂಡವನ್ನು ಕಳುಹಿಸಲು ನಿರ್ಧರಿಸಿದೆ. ಆದರೆ, ಪರಮಾಣು ಬಳಕೆ ಬಗ್ಗೆ ಪ್ರಸ್ತಾವನೆಗೆ ಸಕಾರಾತ್ಮಕ ಸ್ಪಂದನೆ ಸಿಗದ ಕುರಿತು ದಕ್ಷಿಣ ಕೊರೊರಿ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

1950–53ರ ಕೊರಿಯಾ ಯುದ್ಧದ ಬಳಿಕ ಎರಡೂ ದೇಶಗಳು ಇಬ್ಭಾಗವಾಗಿದ್ದವು. 2015ರಲ್ಲಿ ಕೊನೆಯ ಬಾರಿಗೆ ಉಭಯ ದೇಶಗಳ ನಡುವೆ ಉನ್ನತ ಮಟ್ಟದ ಸಭೆ ನಡೆದಿತ್ತು. ಆದರೆ ಒಪ್ಪಂದಕ್ಕೆ ಬರುವಲ್ಲಿ ವಿಫಲವಾಗಿದ್ದವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry