ದಕ್ಕಲಿಲ್ಲ ಮೊದಲ ಪ್ರೀತಿ

7

ದಕ್ಕಲಿಲ್ಲ ಮೊದಲ ಪ್ರೀತಿ

Published:
Updated:
ದಕ್ಕಲಿಲ್ಲ ಮೊದಲ ಪ್ರೀತಿ

ಸೂಪರ್‌ಸ್ಟಾರ್‌ ಎಂದೇ ಖ್ಯಾತಿ ಗಳಿಸಿ ಸಹಸ್ರಾರು ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್‌ ಮೊದಲ ಪ್ರೀತಿಯಲ್ಲಿ ನಿರಾಸೆ ಉಂಡವರು. ‘ಮೊದಲ ಪ್ರೀತಿಯ ಪುಳಕವೇ ಜೀವಮಾನವಿಡಿ ನೆನಪಿನಲ್ಲಿ ಇರುತ್ತದೆ’ ಎಂದಿರುವ ಅವರು ತಮ್ಮ ನೆನಪಿನ ಬುತ್ತಿಯನ್ನು ಇತ್ತೀಚೆಗೆ ಬಿಚ್ಚಿಟ್ಟರು.

‘ಹರೆಯದಲ್ಲಿ ನಾನೂ ಪ್ರೀತಿಯಲ್ಲಿ ಬಿದ್ದವನೇ. ಆಗ ಹೈಸ್ಕೂಲ್‌ನಲ್ಲಿದ್ದೆ. ನನ್ನ ತರಗತಿಯವಳೇ ಆಗಿದ್ದ ಆ ಹುಡುಗಿಯ ಮೇಲೆ ನನಗೇ ತಿಳಿಯದೆ ಮನಸ್ಸಾಗಿತ್ತು. ಬದುಕಿನಲ್ಲಿ ಸಾಕಷ್ಟು ಮಂದಿ ಮೊದಲ ಪ್ರೀತಿಯಲ್ಲಿ ವಿಜಯಿಗಳಾಗುತ್ತಾರೆ. ಆದರೆ ನನ್ನ ವಿಷಯದಲ್ಲಿ ಹಾಗಾಗಲಿಲ್ಲ. ನನ್ನ ಮೊದಲ ಪ್ರೀತಿ ನನಗೆ ಸಿಗಲೇ ಇಲ್ಲ’ ಎಂದು ಹೇಳಿಕೊಂಡಿದ್ದಾರೆ. ಆದರೆ ಆಕೆ ಯಾರೆಂಬ ಗುಟ್ಟನ್ನು ಮಾತ್ರ ರಜನಿ ಬಿಟ್ಟು ಕೊಟ್ಟಿಲ್ಲ.

‘ಮಧ್ಯಮ ವರ್ಗದವರಂತೆ ಒಂದೊಳ್ಳೆ ಸ್ಕೂಟರ್‌, ಅಪಾರ್ಟ್‌ಮೆಂಟ್‌ ಕೊಳ್ಳಬೇಕು ಎಂಬುದಷ್ಟೇ ಆಗಿನ ನನ್ನ ಕನಸಾಗಿತ್ತು’ ಎಂದು ವೃತ್ತಿ ಜೀವನದ ಪ್ರಾರಂಭದಲ್ಲಿದ್ದ ಮನಸ್ಥಿತಿಯನ್ನು ಹೇಳಿಕೊಂಡಿದ್ದಾರೆ.

ಈ ವರ್ಷ ಇವರ ‘2.0’ ಮತ್ತು ‘ಕಾಲಾ’ ಸಿನಿಮಾ ತೆರೆ ಕಾಣಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry