ಗೂಗಲ್‌ನಲ್ಲಿ ಹುಡುಕಿದ್ದೇನು?

7

ಗೂಗಲ್‌ನಲ್ಲಿ ಹುಡುಕಿದ್ದೇನು?

Published:
Updated:
ಗೂಗಲ್‌ನಲ್ಲಿ ಹುಡುಕಿದ್ದೇನು?

ಗೂಗಲ್‌ಮಾಮ ಈಗ ಜನಪ್ರಿಯ ಗುರು. ಹುಷಾರು ತಪ್ಪಿದಾಗ ತೆಗೆದುಕೊಳ್ಳಬೇಕಾದ ಔಷಧದಿಂದ, ಹುಟ್ಟಿದ ಮಗುವಿಗೆ ಯಾವ ಹೆಸರು ಇಡಬೇಕು ಎನ್ನುವವರೆಗೆ ಎಲ್ಲದಕ್ಕೂ ಗೂಗಲ್‌ಮಾಮನ ಸಹಾಯ ಕೋರುವವರು ಇದ್ದಾರೆ.

ಕಳೆದ ವರ್ಷ (2017) ಭಾರತೀಯರು ಗೂಗಲ್‌ ಮಾಡಿದ ವಿಷಯಗಳನ್ನು ಕಂಪೆನಿ ಇದೀಗ ಬಹಿರಂಗಪಡಿಸಿದೆ. ಬಾಲಿವುಡ್‌ ಮತ್ತು ಕ್ರಿಕೆಟ್‌ ಇಂದಿಗೂ ಭಾರತೀಯರ ಆಸಕ್ತಿ ಎಂಬುದನ್ನು ಈ ಪಟ್ಟಿ ಸಾಬೀತುಪಡಿಸಿದೆ. ದುಡ್ಡು ಮಾಡುವುದು ಹೇಗೆ, ಹೂಡಿಕೆ ಎಲ್ಲಿ ಮಾಡಬೇಕು, ತೆರಿಗೆ ಉಳಿಸುವುದು ಹೇಗೆ ಎಂಬ ಬಗ್ಗೆಯೂ ಭಾರತೀಯರು ಗೂಗಲ್ ಜಾಲಾಡಿದ್ದಾರೆ.

ಭಾರತೀಯರ ಹುಡುಕಾಟವನ್ನು ಗೂಗಲ್ ಮೂರು ರೀತಿಯಲ್ಲಿ ವಿಂಗಡಿಸಿ ಬಹಿರಂಗಪಡಿಸಿದೆ. ಅದರ ವಿವರ ಇಲ್ಲಿದೆ ನೋಡಿ...

ಟಾಪ್‌ 10 ಟ್ರೆಂಡಿಂಗ್

* ಬಾಹುಬಲಿ 2

* ಇಂಡಿಯನ್‌ ಪ್ರೀಮಿಯರ್‌ ಲೀಗ್‌

* ಲೈವ್‌ ಕ್ರಿಕೆಟ್‌ ಸ್ಕೋರ್‌

* ದಂಗಲ್‌ (ಬಾಲಿವುಡ್‌)

* ಹಾಫ್‌ ಗರ್ಲ್‌ ಫ್ರೆಂಡ್‌ (ಬಾಲಿವುಡ್‌)

* ಬದ್ರಿನಾಥ್‌ ಕೀ ದುಲ್ಹಾನಿಯ (ಬಾಲಿವುಡ್‌)

* ಮುನ್ನಾ ಮೈಖೆಲ್ (ಬಾಲಿವುಡ್‌)

* ಜಗ್ಗಾ ಜಾಸೂಸ್ (ಬಾಲಿವುಡ್‌)

* ಚಾಂಪಿಯನ್ಸ್‌ ಟ್ರೋಫಿ - ರಯೀಸ್ (ಬಾಲಿವುಡ್‌)

* ಫಾಸ್ಟ್‌ ಅಂಡ್‌ ಫ್ಯೂರಿಯಸ್‌ 8

ಟಾಪ್‌ 10 ಹೇಗೆ (how to)

* ಪ್ಯಾನ್‌ಕಾರ್ಡ್‌ನೊಂದಿಗೆ ಆಧಾರ್‌ ಲಿಂಕ್‌ ಮಾಡುವುದು ಹೇಗೆ?

* ಜಿಯೋ ಫೋನ್‌ ಬುಕ್‌ ಮಾಡುವುದು ಹೇಗೆ?

* ಬಿಟ್‌ ಕಾಯಿನ್‌ ಖರೀದಿಸುವುದು ಹೇಗೆ?

* ಸ್ಕ್ರೀನ್‌ ಶಾಟ್‌ ತೆಗೆದುಕೊಳ್ಳುವುದು ಹೇಗೆ?

* ಹೋಳಿಹಬ್ಬದ ಬಣ್ಣದ ಕಲೆ ತೆಗೆಯುವುದು ಹೇಗೆ?

* ಜಿಎಸ್‌ಟಿ ರಿರ್ಟನ್ಸ್‌ ಫೈಲ್‌ ಮಾಡುವುದು ಹೇಗೆ?

* ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಹೇಗೆ?

* ಬಿಟ್‌ ಕಾಯಿನ್‌ ಸಂಗ್ರಹಿಸುವುದು ಹೇಗೆ?

* ಹಿಂದಿಯಲ್ಲಿ ಬರುತ್ತಿರುವ ಬಿಗ್‌ ಬಾಸ್‌ 11 ಆವೃತ್ತಿಯಲ್ಲಿ ನೆಚ್ಚಿನ ಸ್ಪರ್ಧಿಗೆ ವೋಟ್‌ ಮಾಡುವುದು ಹೇಗೆ?

* ಭಾರತದಲ್ಲಿ ಇಥೇರಿಯಂ(Ethereum)  ಖರೀದಿಸುವುದು ಹೇಗೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry