ಅಭಿಮಾನಿಗಳಿಗಾಗಿ ಆ್ಯಮಿ

7

ಅಭಿಮಾನಿಗಳಿಗಾಗಿ ಆ್ಯಮಿ

Published:
Updated:
ಅಭಿಮಾನಿಗಳಿಗಾಗಿ ಆ್ಯಮಿ

ಬ್ರಿಟನ್‌ನಲ್ಲಿ ಜನಪ್ರಿಯ ನಟಿಯಾಗಿ, ಮಾಡೆಲ್‌ ಆಗಿ ಮೆರೆದವರು ಆ್ಯಮಿ ಜಾಕ್ಸನ್‌. ಭಾರತೀಯ ಸಿನಿಮಾರಂಗದಲ್ಲಿಯೂ ಇವರದ್ದು ಚಿರಪರಿಚಿತ ಹೆಸರು. ಅಂದದ ನೋಟ, ಚಂದದ ನಗುವಿನೊಂದಿಗೆ ಆಕರ್ಷಕ ಮೈಮಾಟವನ್ನೂ ಹೊಂದಿರುವ ಈ ಬೆಡಗಿ ತಮಿಳು, ತೆಲುಗು, ಹಿಂದಿ, ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ.

ಭಾರತೀಯ ಸಿನಿಮಾ ಜಗತ್ತಿನಿಂದ ಕಳೆದೆರಡು ವರ್ಷಗಳಿಂದ ದೂರವಿದ್ದ ಆ್ಯಮಿ ಅಭಿಮಾನಿಗಳ ಮನದಾಳದಲ್ಲಿ ಸದಾ ನೆಲೆಸಲು ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿಯೇ ಬಳಸಿಕೊಳ್ಳುತ್ತಾರೆ. ಬಗೆಬಗೆ ದಿರಿಸು ತೊಟ್ಟ ತಮ್ಮ ಹಸಿಬಿಸಿ ಚಿತ್ರಗಳನ್ನು ಹಾಕುತ್ತಾ ಅಭಿಮಾನಿಗಳ ಮನದಿಂದ ಮರೆಯಾಗದೇ ಇರಲು ಯತ್ನಿಸುತ್ತಾರೆ.

ಇನ್‌ಸ್ಟಾಗ್ರಾಂನಲ್ಲಿ ಸುಮಾರು 30 ಲಕ್ಷ ಮಂದಿ ಆ್ಯಮಿ ಜಾಕ್ಸನ್ ಅವರನ್ನು ಫಾಲೊ ಮಾಡುತ್ತಿದ್ದಾರೆ. ಅವರು ಈಚೆಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ಬಿಕಿನಿ ಚಿತ್ರ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ತಮ್ಮ ಚಿತ್ರಕ್ಕೆ ‘ಬರ್ತ್‌ಡೇ ಗಾಡೆಸ್‌’ ಎಂದು ಅಡಿಬರಹವನ್ನೂ ಅವರು ಕೊಟ್ಟುಕೊಂಡಿದ್ದಾರೆ.

ಆ್ಯಮಿ ಅವರನ್ನು ಇನ್‌ಸ್ಟಾಗ್ರಾಂನಲ್ಲಷ್ಟೇ ಕಣ್ತುಂಬಿಕೊಳ್ಳಬೇಕೆ ಎಂದು ಬೇಸರಿಸಬೇಡಿ. 2018ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿರುವ ‘2.0’ ಚಿತ್ರದಲ್ಲಿ ಆ್ಯಮಿ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry