ಪಾತ್ರಕ್ಕಾಗಿ ಸರ್ಕಸ್‌

7

ಪಾತ್ರಕ್ಕಾಗಿ ಸರ್ಕಸ್‌

Published:
Updated:
ಪಾತ್ರಕ್ಕಾಗಿ ಸರ್ಕಸ್‌

ಬಾಲಕ, ಕಾಲೇಜು ಯುವಕ ಹಾಗೂ ಪ್ರಬುದ್ಧ ಗಂಡಸು... ‘ಪ್ರೇಮಂ’ ಚಿತ್ರದಲ್ಲಿ ಮೂರು ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ಮಲೆಯಾಳಂ ನಟ ನಿವಿನ್‌ ಪೌಲಿ. ಬಳಿಕ ‘ಆ್ಯಕ್ಷನ್‌ ಹೀರೋ ಬಿಜು’ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ ಮಾಡಿದ್ದರು. ‘ತಟ್ಟಥಿನ್‌ ಮರಯತು’ ನಿವಿನ್ ನಾಯಕನಟನಾಗಿ ಅಭಿನಯಿಸಿದ ಮೊದಲ ಚಿತ್ರ. ‘ನೇರಂ’, ‘ಓಂ ಶಾಂತಿ ಓಷಾಣ’, ‘ಬೆಂಗಳೂರು ಡೇಸ್‌’ ಇವರ ಅಭಿನಯದ ಪ್ರಮುಖ ಚಿತ್ರಗಳು. ಸದ್ಯ ‘ಉಳಿದವರು ಕಂಡಂತೆ’ ಸಿನಿಮಾದ ಮಲೆಯಾಳಂ ರಿಮೇಕ್‌ ‘ರಿಚ್ಚಿ’ಯಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಕ್ಷೇತ್ರದವರು ಫಿಟ್‌ನೆಸ್ ಹಾಗೂ ಡಯೆಟ್‌ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುತ್ತಾರೆ. ಇದಕ್ಕೆ ನಿವಿನ್‌ ಪೌಲಿ ಕೂಡ ಹೊರತಲ್ಲ. ಪಾತ್ರವು ಬೇಡಿದರೆ ಯಾವುದೇ ಸರ್ಕಸ್‌ ಮಾಡಲು ಸಿದ್ಧ ಎಂಬ ಮನೋಭಾವ ಅವರದು. ಇತ್ತೀಚೆಗೆ ‘ರಿಚ್ಚಿ’ ಸಿನಿಮಾಕ್ಕಾಗಿ ಅವರು ಸಣ್ಣಗಾಗಬೇಕಿತ್ತು. ಅದಕ್ಕಾಗಿ ಅವರು ದೈನಂದಿನ ವ್ಯಾಯಾಮಕ್ಕಿಂತ ಹೆಚ್ಚು ಸಮಯ ಜಿಮ್‌ನಲ್ಲಿ ಕಾಲ ಕಳೆದಿದ್ದಾರಂತೆ.

‘ನಾನು ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಅಥವಾ ದೇಹ ಫಿಟ್‌ ಆಗಿರುವಂತೆ ನೋಡಿಕೊಳ್ಳಲು ಹೆಚ್ಚು ದೈಹಿಕ ಶ್ರಮ ಏನೂ ಮಾಡುತ್ತಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಗೆ ದೈಹಿಕ ಶ್ರಮ ಎಷ್ಟು ಅಗತ್ಯವೋ ಅಂತಹ ವ್ಯಾಯಾಮಗಳನ್ನೇ ದಿನಾ ಮಾಡುತ್ತೇನೆ. ‍ತೂಕ ಹೆಚ್ಚಾಗದಂತೆ ಡಯೆಟ್‌ ಅನುಸರಿಸುತ್ತೇನೆ’ ಎಂದು ನಿವಿನ್‌ ಹೇಳಿಕೊಂಡಿದ್ದಾರೆ. ಇದಲ್ಲದೇ ಆ್ಯಕ್ಷನ್‌ ದೃಶ್ಯಗಳಿಗಾಗಿ ಅವರು ಕೆಲವು ಫೈಟಿಂಗ್‌ ತರಗತಿಗೆ ಹೋಗುತ್ತಿದ್ದು, ಇದರಿಂದಲೂ ದೇಹ ಫಿಟ್‌ ಆಗಿರುತ್ತದೆ ಎಂಬುದು ಅವರ ವಿವರಣೆ.

ಒಬ್ಬ ನಟನಾಗಿ ದೇಹವನ್ನು ಫಿಟ್‌ ಹಾಗೂ ಆರೋಗ್ಯಯುತವಾಗಿ ಇರಿಸಿಕೊಳ್ಳಲು ಪೌಷ್ಟಿಕಾಂಶಯುಕ್ತ ಡಯೆಟ್‌ ಅನುಕರಿಸುತ್ತಾರೆ ನಿವಿನ್‌. ವಿದೇಶದಲ್ಲಿ ಹುಟ್ಟಿ ಬೆಳೆದರೂ ಇವರಿಗೆ ಕೇರಳದ ಸಾಂಪ್ರದಾಯಿಕ ಅಡುಗೆಗಳು ಇಷ್ಟ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry