ಅಧಿಕಾರಿಗಳ ಸಭೆಯಲ್ಲಿ ‌ರಾಜ್ಯದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಕಾರ್ಯಕ್ಕೆ ಪ್ರಧಾನಿ ಮೋದಿ ಪ್ರಶಂಸೆ

7

ಅಧಿಕಾರಿಗಳ ಸಭೆಯಲ್ಲಿ ‌ರಾಜ್ಯದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಕಾರ್ಯಕ್ಕೆ ಪ್ರಧಾನಿ ಮೋದಿ ಪ್ರಶಂಸೆ

Published:
Updated:
ಅಧಿಕಾರಿಗಳ ಸಭೆಯಲ್ಲಿ ‌ರಾಜ್ಯದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಕಾರ್ಯಕ್ಕೆ ಪ್ರಧಾನಿ ಮೋದಿ ಪ್ರಶಂಸೆ

ಬೆಂಗಳೂರು: ರಾಜ್ಯದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಪೊಲೀಸ್‌ ಕಾನ್‌ಸ್ಟೇಬಲ್‌ ಮೂಲಕ ಎದುರಾದ 27 ವರ್ಷಗಳ ಹಿಂದಿನ ಪುಟ್ಟ ಕಾರ್ಯದ ನೆನಪಿನ ಬಗ್ಗೆ ಮಾಡಿದ್ದ ಟ್ವೀಟ್‌, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೆಳೆದಿತ್ತು. ಜಿಲ್ಲಾಧಿಕಾರಿಗಳು, ಉನ್ನತ ಮಟ್ಟದ ಅಧಿಕಾರಿಗಳು ಇದ್ದ ಸಭೆಯಲ್ಲಿ ಆ ಟ್ವೀಟ್‌ ಪ್ರಸ್ತಾಪಿಸಿದ ಪ್ರಧಾನಿ, ರತ್ನಪ್ರಭಾ ಅವರ ಕಾರ್ಯವನ್ನು ಮಾದರಿಯಾಗಿ ಸೂಚಿಸಿ ಪ್ರಶಂಸಿದ್ದರು.

ಇದೇ 5ರಂದು ನವದೆಹಲಿಯ ಡಾ.ಅಂಬೇಡ್ಕರ್‌ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ‘ಹೆಸರನ್ನು ಮರೆತಿದ್ದೇನೆ...ಆ ಹಿರಿಯ ಅಧಿಕಾರಿ ಮಾಡಿದ ಟ್ವೀಟ್‌ ನನ್ನ ನೆನಪಿನಲ್ಲಿದೆ’ ಎಂದು ಪ್ರಧಾನಿ ಮೋದಿ ಅಧಿಕಾರಿಗಳ ಮುಂದೆ ರತ್ನಪ್ರಭಾ ಅವರ ಟ್ವೀಟ್‌ ಪ್ರಸ್ತಾಪಿಸಿದರು. ಇದು ನಿಮ್ಮ ಕಾರ್ಯಕ್ಕೆ ಹಿಡಿದ ಕನ್ನಡಿ ಎಂದರು.

ಏನದು ರತ್ನಪ್ರಭಾ ಅವರ ಟ್ವೀಟ್‌ ?
ಇದು ಕೆ.ರತ್ನಪ್ರಭಾ ಅವರು ರಾಯಚೂರು ಡಿಸಿಯಾಗಿದ್ದಾಗ ನಡೆದ ಘಟನೆ. ‘ಹುಡುಗನೊಬ್ಬ ಕುರಿ ಮೇಯಿಸುತ್ತಿರುವುದನ್ನು ಕಂಡು ಕಾರು ನಿಲ್ಲಿಸಿ ಶಿಕ್ಷಕರನ್ನು ಕರೆದು ಆತನನ್ನು ಶಾಲೆಗೆ ಸೇರಿಸಿಕೊಳ್ಳುವಂತೆ ಸೂಚಿಸಿದ್ದೆ. ಅದಾಗಿ 27 ವರ್ಷಗಳು ಕಳೆದಿವೆ. ಓದು ಪೂರೈಸಿದ ನರಸಪ್ಪ (ಇಡಪನೂರು ಗ್ರಾಮ)ಈಗ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದಾರೆ. ನರಸಪ್ಪ ಬಂದು ನನಗೆ ಥ್ಯಾಂಕ್ಸ್‌ ಹೇಳಿದರು. ನಾನು ಕೊಟ್ಟ ಸಣ್ಣ ನಿರ್ದೇಶನ ಇಷ್ಟು ಪರಿಣಾಮ ಉಂಟು ಮಾಡಿದೆಯೆಂದರೆ ನಂಬಲಾಗುತ್ತಿಲ್ಲ'' ಎಂದು ಜ.3ರಂದು ಟ್ವೀಟ್‌ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry