ದ್ರಾವಿಡ ಪ್ರಾಣಾಯಾಮ!

7

ದ್ರಾವಿಡ ಪ್ರಾಣಾಯಾಮ!

Published:
Updated:

ಕೇಂದ್ರ ಸಚಿವರೊಬ್ಬರ ಸಂವಿಧಾನ ಬದಲಾವಣೆಯ ಉದ್ದೇಶದ ಪ್ರಕಟಣೆಯನ್ನು ಅನಂತಮೂರ್ತಿಯವರ ‘ಭವಿಷ್ಯದ ಪ್ರಧಾನಿ ಇಂಥವರೊಬ್ಬರು ಆಗದಿರಲಿ’ ಎಂಬಂತಹ ಅಂತರಂಗದ ಅನಿಸಿಕೆಯೊಂದಿಗೆ ತಳಕು ಹಾಕಿ ಡಾ. ಆರ್.ವಿಜಯಸಾರಥಿಯವರು ಟೀಕಿಸಿರುವುದು (ವಾ.ವಾ., ಜ.8) ಅಸಂಬದ್ಧ ದ್ರಾವಿಡ ಪ್ರಾಣಾಯಾಮವೇ ಸರಿ.

ಆ ಸಂದರ್ಭದ ಅವರ ರಾಜಕೀಯ ಚಿಂತನೆ ಭಾರತದ ವಿಶಿಷ್ಟ ಬಹುತ್ವದ ಬಗೆಗಿನ ಹಾಗೂ ಜಾತ್ಯತೀತತೆಯ ಮತ್ತು ಒಟ್ಟಿನಲ್ಲಿ ಸಂವಿಧಾನದ ಮೂಲೋದ್ದೇಶದ ಸಂರಕ್ಷಣೆಯ ಜವಾಬ್ದಾರಿಯ (ಸ್ವಲ್ಪ ಅಸಹನೆಯ ಆತುರತೆಯಿದ್ದೂ) ಹಿನ್ನೆಲೆಯಿಂದ ಬಂದ ಹೇಳಿಕೆಯಾಗಿತ್ತು. ಜಾತ್ಯತೀತತೆಯ ಅರ್ಥವನ್ನರಿಯದ ಸಂವಿಧಾನದ ಮೂಲೋದ್ದೇಶವನ್ನೇ ತಿರುಚುವಂಥದ್ದಲ್ಲ.

ಅನಂತಮೂರ್ತಿಯವರ ಬಗೆಗಿನ ಮತ್ಸರವೂ ನಮ್ಮ ನಡುವೆ ಪಡೆದುಕೊಂಡಿರುವ ನಾನಾ ರೂಪಗಳು ಅಧ್ಯಯನಯೋಗ್ಯವೇನೊ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry