ಪ್ರಬುದ್ಧ ಸಮಾಜ

7

ಪ್ರಬುದ್ಧ ಸಮಾಜ

Published:
Updated:

ಕೆಲವು ದಶಕಗಳ ಹಿಂದೆ ಮಾಧ್ಯಮಗಳು ಇಷ್ಟು ಪ್ರಬಲವಾಗಿರಲಿಲ್ಲ. ಆದರೂ, ಗಲಭೆಗಳು ಬೇಗ ಒಂದೆಡೆಯಿಂದ ಇನ್ನೊಂದೆಡೆಗೆ ಸಾಂಕ್ರಾಮಿಕ ರೋಗದ ರೀತಿ ಹಬ್ಬುತ್ತಿದ್ದವು.

ಈಗ ಮೀಡಿಯಾಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಅದನ್ನು ಪ್ರಚೋದನೆಗಾಗಿ ಬಳಸುತ್ತಿರುವವರನ್ನೂ ನೋಡುತ್ತಿದ್ದೇವೆ. ಆದರೂ, ಗಲಭೆ ಎಂಬ ರೋಗ, ಎಲ್ಲಿ ಕಾಣಿಸಿಕೊಳ್ಳುತ್ತಿದೆಯೋ ಆ ಎಲ್ಲೆಯನ್ನು ಮೀರಿ ಹಬ್ಬುತ್ತಿಲ್ಲ.

ಈಗ ನನಗೆ ಖಾತ್ರಿಯಾಗಿದೆ, ನಮ್ಮ ಜನ ಎಚ್ಚೆತ್ತುಕೊಂಡಿದ್ದಾರೆ. ಸಮಾಜ ಪ್ರಬುದ್ಧಗೊಂಡ ಲಕ್ಷಣ ಇದು. ನಾವು ಇನ್ನೂ ಭರವಸೆಯನ್ನು ಇಟ್ಟುಕೊಳ್ಳಬಹುದು. ಇದಕ್ಕಲ್ಲವೇ ದೊಡ್ಡವರು ಹೇಳಿದ್ದು ‘ಎಲ್ಲರನ್ನೂ ಎಲ್ಲ ಕಾಲಕ್ಕೂ ಮರುಳು ಮಾಡಲಾಗುವುದಿಲ್ಲ’ ಎಂದು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry