ಕುಮಾರಸ್ವಾಮಿ ವಿರುದ್ಧ ₹1 ಕೋಟಿ ಮಾನಹಾನಿ ಮೊಕದ್ದಮೆ ದಾಖಲು‌

7

ಕುಮಾರಸ್ವಾಮಿ ವಿರುದ್ಧ ₹1 ಕೋಟಿ ಮಾನಹಾನಿ ಮೊಕದ್ದಮೆ ದಾಖಲು‌

Published:
Updated:

ಮಂಗಳೂರು: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಬಿಜೆಪಿ ನಗರ ಉತ್ತರ ಘಟಕದ ವತಿಯಿಂದ ₹1 ಕೋಟಿ ಮೊತ್ತದ ಮಾನಹಾನಿ ಮೊಕದ್ದಮೆಯನ್ನು ನಗರದ ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಲಯದಲ್ಲಿ ಮಂಗಳವಾರ ದಾಖಲಿಸಲಾಗಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಗರ ಉತ್ತರ ಘಟಕದ ಅಧ್ಯಕ್ಷ ಡಾ. ಭರತ್‌ ಶೆಟ್ಟಿ, ‘ಕುಮಾರಸ್ವಾಮಿ ಆಧಾರವಿಲ್ಲದೇ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದು, ಬಿಜೆಪಿ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ಪಕ್ಷದಿಂದ ಮಾನಹಾನಿ ಮೊಕದ್ದಮೆ ದಾಖಲಿಸಲಾಗಿದೆ’ ಎಂದರು.

‘ಶಾಸಕ ಮೊಯಿದ್ದೀನ್‌ ಬಾವ ಅವರ ಸಹೋದರ ಬಿ.ಎಂ. ಫಾರೂಕ್‌ ಅವರು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಸೂಟ್‌ಕೇಸ್‌ ನೀಡಿದ ಬಗ್ಗೆ ಈ ಹಿಂದೆಯೇ ಪ್ರಸ್ತಾಪವಾಗಿತ್ತು. ಈ ರೀತಿಯ ಹೇಳಿಕೆ ನೀಡುವ ಮೂಲಕ ಕುಮಾರಸ್ವಾಮಿ ಅವರು, ಸೂಟ್‌ಕೇಸ್‌ ಪಡೆದಿದ್ದರ ಋಣ ತೀರಿಸಿದ್ದಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry