‘ಚಕ್ಕಂದ ಆಡಿದರೆ ಧರ್ಮದೇಟು’

7
ಹಿಂದೂ ಹುಡುಗಿಯರಿಗೆ ಎಚ್ಚರಿಕೆ ಸಂದೇಶ–ವೈರಲ್‌

‘ಚಕ್ಕಂದ ಆಡಿದರೆ ಧರ್ಮದೇಟು’

Published:
Updated:
‘ಚಕ್ಕಂದ ಆಡಿದರೆ ಧರ್ಮದೇಟು’

ಚಿಕ್ಕಮಗಳೂರು: ಮೂಡಿಗೆರೆ ನಗರದ ಆಸುಪಾಸಿನ ಎಲ್ಲ ಹುಡುಗಿಯರಿಗೆ ಕೊನೆಯ ಎಚ್ಚರಿಕೆ ನೀಡುತ್ತಿದ್ದೇವೆ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

‘ಕಾಲೇಜಿನಲ್ಲಿ ತನ್ನ ಸಹಪಾಠಿ ಎಂಬ ಸಲುಗೆಯಿಂದ ಅನ್ಯಧರ್ಮದ ಯುವಕರೊಂದಿಗೆ ಚಕ್ಕಂದವಾಡುತ್ತಿರುವುದು ಎಲ್ಲಿ ಕಂಡರೂ ಅಲ್ಲಿ ನಿಮ್ಮ ಮಾತಿಗೆ ಅವಕಾಶ ಕೊಡದೇ ಧರ್ಮದೇಟು ಗ್ಯಾರಂಟಿ. ಕಾರಣ ನೂರು ಇರಬಹುದು, ಅದರ ಅವಶ್ಯಕತೆ ಇಲ್ಲ. ನಮಗೆ ಹಿಂದೂ ಧರ್ಮ ಮುಖ್ಯ, ಧರ್ಮವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. # ಧರ್ಮೊ ರಕ್ಷತಿ ರಕ್ಷಿತಃ # *ಮೂಡಿಗೆರೆ ಬಜರಂಗದಳ’ ಎಂಬ ಮಾಹಿತಿ ಸಂದೇಶದಲ್ಲಿ ಇದೆ.

ಮೂಡಿಗೆರೆ ವರದಿ: ಪಟ್ಟಣದ ಛತ್ರ ಮೈದಾನದಲ್ಲಿ ಕಳೆದ ಶನಿವಾರ ಆತ್ಮಹತ್ಯೆ ಮಾಡಿಕೊಂಡ ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀ ಅವರ ಪೋಷಕರು ಎರಡು ದಿನ

ಗಳಿಂದ ನಾಪತ್ತೆಯಾಗಿದ್ದಾರೆ. ಮನೆಗೆ ಬೀಗ ಹಾಕಲಾಗಿದೆ.

‘ಭಾನುವಾರ ಮಧ್ಯಾಹ್ನದ ವೇಳೆಗೆ ಬೀಜುವಳ್ಳಿಯ ಸಾರ್ವಜನಿಕ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿದ ಬಳಿಕ, ಮನೆಗೆ ಬಂದ ಧನ್ಯಶ್ರೀ ತಂದೆ ಯಾದವ ಸುವರ್ಣ, ತಾಯಿ ಸರಸ್ವತಿ ಹಾಗೂ ಕುಟುಂಬವರ್ಗದವರು ರಾತ್ರಿಯವರೆಗೂ ಮನೆಯಲ್ಲಿಯೇ ಇದ್ದರು. ಆದರೆ ಸೋಮವಾರ ಮುಂಜಾನೆಯಿಂದಲೂ ಕಾಣುತ್ತಿಲ್ಲ. ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ’ ಎಂದು ನೆರೆಮನೆಯ ನಿವಾಸಿಯೊಬ್ಬರು ಮಾಹಿತಿ ನೀಡಿದರು.

ಬೀದಿಗಿಳಿದ ವಿದ್ಯಾರ್ಥಿಗಳು: ಧನ್ಯಶ್ರೀ ಓದುತ್ತಿದ್ದ ಪಟ್ಟಣದ ಡಿ.ಎಸ್‌. ಬಿಳೀಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಬೀದಿಗಿಳಿದು, ಆರೋಪಿಗಳನ್ನು ಕೂಡಲೇ ಬಂಧಿಸಿ ಗಲ್ಲುಶಿಕ್ಷೆ ವಿಧಿಬೇಕು ಎಂದು ಆಗ್ರಹಿಸಿದರು.

ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಆರೋಪಿ

ಆತ್ಮಹತ್ಯೆ ಪ್ರಕರಣದ ಆರೋಪಿಯಾದ ಎಂ.ವಿ. ಅನಿಲ್‌ ಧನ್ಯಶ್ರೀಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ. ತಾಲ್ಲೂಕು ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಈತನ ಮನೆ ಧನ್ಯಶ್ರೀ ಮನೆ ಸಮೀಪವೇ ಇದೆ. ಅಂತ್ಯಸಂಸ್ಕಾರ ಮುಗಿಯುತ್ತಿದ್ದಂತೆ ಪೊಲೀಸರು ಆತನನ್ನು ವಶಕ್ಕೆ ಪಡೆದರು ಎಂದು ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry