‘ಪದ್ಮಾವತ್’ ಬಿಡುಗಡೆಗೆ ಮತ್ತೆ ವಿರೋಧ

7

‘ಪದ್ಮಾವತ್’ ಬಿಡುಗಡೆಗೆ ಮತ್ತೆ ವಿರೋಧ

Published:
Updated:

ಜೈಪುರ: ‘ದೇಶದ ಯಾವುದೇ ಭಾಗದಲ್ಲಿ ಪದ್ಮಾವತ್ ಚಿತ್ರ ಬಿಡುಗಡೆಯಾದರೂ ಉಗ್ರ ಪ್ರತಿಭಟನೆ ನಡೆಸುತ್ತೇವೆ’ ಎಂದು ಶ್ರೀ ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾ ಹೇಳಿದೆ.

ರಾಜಸ್ಥಾನದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ವಸುಂಧರಾ ರಾಜೆ ಘೋಷಿಸಿದ ಮರುದಿನವೇ ಈ ಎಚ್ಚರಿಕೆ ನೀಡಲಾಗಿದೆ.

‘ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ನಡೆಯಿಂದ ನಮಗೆಲ್ಲಾ ಸಮಾಧಾನವಾಗಿದೆ. ಚಿತ್ರದಲ್ಲಿ ಮಾಡಿರುವ ಬದಲಾವಣೆಯಿಂದ ನಮಗೆ ತೃ‍ಪ್ತಿಯಾಗಿಲ್ಲ. ನಮಗೆ ತೃಪ್ತಿಯಾಗುವವರೆಗೂ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ. ಒಂದೊಮ್ಮೆ ಇದೇ 25ರಂದು ಚಿತ್ರ ಬಿಡುಗಡೆಗೆ ಮಂಡಳಿ ಅವಕಾಶ ಮಾಡಿಕೊಟ್ಟರೆ ಇಡೀ ಭಾರತ ಹೊತ್ತಿ ಉರಿಯಲಿದೆ’ ಎಂದು ಕರ್ಣಿ ಸೇನಾ ಬೆದರಿಕೆ ಹಾಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry