ಮಧ್ಯಾಹ್ನದ ಬಿಸಿಯೂಟಕ್ಕೆ ಬೇಳೆಕಾಳು

7

ಮಧ್ಯಾಹ್ನದ ಬಿಸಿಯೂಟಕ್ಕೆ ಬೇಳೆಕಾಳು

Published:
Updated:

ನವದೆಹಲಿ: ದೇಶದಾದ್ಯಂತ ಶಾಲಾ ಮಕ್ಕಳ ಬಿಸಿಯೂಟ ಯೋಜನೆಗಾಗಿ ತನ್ನ ಕಾಪು ದಾಸ್ತಾನಿನಿಂದ ಬೇಳೆ–ಕಾಳುಗಳನ್ನು (ದ್ವಿದಳ ಧಾನ್ಯಗಳು) ಹಂಚುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ.

ವಾರ್ಷಿಕವಾಗಿ ಎಷ್ಟು ಬೇಳೆ–ಕಾಳು ಬೇಕಾಗುತ್ತದೆ ಎಂಬುದರ ಬಗ್ಗೆ ವರದಿ ನೀಡುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೂಚಿಸಿದೆ.

ಈ ಯೋಜನೆಗಾಗಿ ಗ್ರಾಹಕ ವ್ಯವಹಾರಗಳ ಇಲಾಖೆಯು ತನ್ನ ಕೇಂದ್ರ ಕಾಪು ದಾಸ್ತಾನಿನಿಂದ 19.20 ಟನ್‌ಗಳಷ್ಟು ಬೇಳೆ–ಕಾಳುಗಳನ್ನು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಮಹಾಮಂಡಲದ (ನಾಫೆಡ್) ಮೂಲಕ ಪೂರೈಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry