ಸಿಕ್ಕಿಂ ಪ್ರಚಾರ ರಾಯಭಾರಿಯಾಗಿ ಎ.ಆರ್‌.ರೆಹಮಾನ್‌

7

ಸಿಕ್ಕಿಂ ಪ್ರಚಾರ ರಾಯಭಾರಿಯಾಗಿ ಎ.ಆರ್‌.ರೆಹಮಾನ್‌

Published:
Updated:
ಸಿಕ್ಕಿಂ ಪ್ರಚಾರ ರಾಯಭಾರಿಯಾಗಿ ಎ.ಆರ್‌.ರೆಹಮಾನ್‌

ಗ್ಯಾಂಗ್ಟಕ್‌ : ಸಂಗೀತ ಮಾಂತ್ರಿಕ ಎ.ಆರ್‌.ರೆಹಮಾನ್‌ ಅವರನ್ನು ಸಿಕ್ಕಿಂನ ಅಧಿಕೃತ ಬ್ರ್ಯಾಂಡ್‌ ರಾಯಭಾರಿಯಾಗಿ ನೇಮಿಸಲಾಗಿದೆ. ಇಲ್ಲಿನ ಪಾಲ್ಜೋರ್‌ ಮೈದಾನದಲ್ಲಿ ನಡೆದ 'ರೆಡ್‌ ಪಾಂಡಾ ವಿಂಟರ್‌ ಫೆಸ್ಟಿವಲ್‌' ಕಾರ್ಯಕ್ರಮದಲ್ಲಿ  ಮುಖ್ಯಮಂತ್ರಿ ಪವನ್‌ ಚಾಮ್ಲಿಂಗ್‌ ಅವರು ಈ ಘೋಷಣೆ ಮಾಡಿದರು.

‘ರಾಜ್ಯದ ಜತೆಗೆ ಸಹಭಾಗಿತ್ವ ಹೊಂದುವಂತೆ ಸರ್ಕಾರದ ಪ್ರಸ್ತಾವವನ್ನು ಸ್ವೀಕರಿಸಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಸಿಎಂ ಚಾಮ್ಲಿಂಗ್‌ ತಿಳಿಸಿದರು.

‘ಪರಿಸರಸ್ನೇಹಿ ಹಾಗೂ ಅತ್ಯಂತ ಸುಂದರ ತಾಣಗಳಿಗೆ ಸಿಕ್ಕಿಂ ಹೆಸರು ಗಳಿಸಿದೆ. ಇದೀಗ ರಾಯಭಾರಿಯಾಗಿ ನೇಮಿಸಿ ಗೌರವ ನೀಡಿದ್ದಕ್ಕಾಗಿ ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಇದೇ ವೇಳೆ ರೆಹಮಾನ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry