ಚಂಡಿಗಡ ಪಾಲಿಕೆ ಚುನಾವಣೆ: ಮೇಯರ್‌, ಉಪಮೇಯರ್‌ ಸ್ಥಾನ ಗೆದ್ದ ಬಿಜೆಪಿ

7

ಚಂಡಿಗಡ ಪಾಲಿಕೆ ಚುನಾವಣೆ: ಮೇಯರ್‌, ಉಪಮೇಯರ್‌ ಸ್ಥಾನ ಗೆದ್ದ ಬಿಜೆಪಿ

Published:
Updated:

ಚಂಡಿಗಡ : ಇಲ್ಲಿನ ನಗರಪಾಲಿಕೆಯ ಮೇಯರ್‌, ಹಿರಿಯ ಉಪಮೇಯರ್‌ ಹಾಗೂ ಉಪಮೇಯರ್‌ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ.

‘ದವೇಶ್‌ ಮೌದ್ಗಿಲ್‌ ಅವರು ಮೇಯರ್‌ ಆಗಿ ಆಯ್ಕೆಯಾಗಿದ್ದು, ಹಿರಿಯ ಉಪಮೇಯರ್‌ ಆಗಿ ಗುಪ್ರೀತ್‌ ಸಿಂಗ್‌ ಧಿಲ್ಲೋನ್‌ ಹಾಗೂ ಉಪಮೇಯರ್‌ ಆಗಿ ವಿನೋದ್‌ ಅಗರ್‌ವಾಲ್‌ ಆಯ್ಕೆಯಾದರು’ ಎಂದು ಚುನಾವಣಾ ಆಯೋಗದ ವಕ್ತಾರರು ತಿಳಿಸಿದರು.

27 ಸದಸ್ಯ ಬಲವನ್ನು ಹೊಂದಿರುವ ಪಾಲಿಕೆಯ 22ನೇ ಮೇಯರ್‌ ಆಗಿ ಮೌದ್ಗಿಲ್‌ ಆಯ್ಕೆಯಾಗಿದ್ದಾರೆ. ಪಾಲಿಕೆಯಲ್ಲಿ ಬಿಜೆಪಿ 20 ಸದಸ್ಯರನ್ನು ಹೊಂದಿದ್ದು, ಕಾಂಗ್ರೆಸ್‌ 4, ಶಿರೋಮಣಿ ಅಕಾಲಿದಳ ಹಾಗೂ ಪಕ್ಷೇತರ ತಲಾ ಒಬ್ಬರು ಸದಸ್ಯರಿದ್ದಾರೆ. ಸ್ಥಳೀಯ ಬಿಜೆಪಿ ಸಂಸದೆ ಕಿರಣ್ ಖೇರ್‌ ಕೂಡ ಮೇಯರ್‌ ಒಂದು ಮತವನ್ನು ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry