ನಮ್ಮ ಮೆಟ್ರೊ ಬೋಗಿಯೊಂದರ ಬಾಗಿಲು ಅರ್ಧ ತೆರೆದೇ ಇತ್ತು!

7

ನಮ್ಮ ಮೆಟ್ರೊ ಬೋಗಿಯೊಂದರ ಬಾಗಿಲು ಅರ್ಧ ತೆರೆದೇ ಇತ್ತು!

Published:
Updated:
ನಮ್ಮ ಮೆಟ್ರೊ ಬೋಗಿಯೊಂದರ ಬಾಗಿಲು ಅರ್ಧ ತೆರೆದೇ ಇತ್ತು!

ಬೆಂಗಳೂರು: ಬೋಗಿಯೊಂದರ ಬಾಗಿಲು ಅರ್ಧ ತೆರೆದ ಸ್ಥಿತಿಯಲ್ಲೇ ಮೆಟ್ರೊ ರೈಲು ಭಾನುವಾರ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ನಿಲ್ದಾಣದವರೆಗೆ ಚಲಿಸಿತು.

ಬೈಯಪ್ಪನಹಳ್ಳಿ ನಿಲ್ದಾಣದಿಂದ ಹೊರಟಿದ್ದ ರೈಲಿನ ಬಾಗಿಲು ಅರ್ಧ ಮಾತ್ರ ಮುಚ್ಚಿತ್ತು. ಇನ್ನರ್ಧ ತೆರೆದೇ ಇತ್ತು. ಹೀಗಾಗಿ ಅಪಾಯದ ಸಂಕೇತ ಸೂಚಿಸುವ ದೀಪ ಹೊತ್ತಿಕೊಂಡಿತ್ತು. ಅದನ್ನು ಗಮನಿಸಿದ ಪ್ರಯಾಣಿಕರು, ಬಾಗಿಲಿನಿಂದ ದೂರ ನಿಂತಿದ್ದರು. ರೈಲು ಚಲಿಸುವ ವೇಳೆಯಲ್ಲಿ ಹೊರಗಿನಿಂದ ಗಾಳಿ ಒಳಗೆ ಬರುತ್ತಿತ್ತು.

ಇದರಿಂದಾಗಿ ಪ್ರಯಾಣಿಕರಲ್ಲಿ ಕೆಲಹೊತ್ತು ಆತಂಕ ಉಂಟಾಗಿತ್ತು. ಕೆಲ ಪ್ರಯಾಣಿಕರು, ರೈಲು ಚಲಿಸುತ್ತಿದ್ದ ಸಂದರ್ಭದಲ್ಲೇ ಆ ಬಾಗಿಲೊಳಗೆ ಕೈ ಹಾಕಿ ಪರೀಕ್ಷೆ ಸಹ ನಡೆಸಿದರು. ಅದರ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅವರೇ ಹರಿಬಿಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry