ಕೊರಿಯಾ: ಉಭಯ ರಾಷ್ಟ್ರಗಳ ಸೇನೆ ನಡುವೆ ಮತ್ತೆ ನೇರ ದೂರವಾಣಿ ಸಂಪರ್ಕ

7

ಕೊರಿಯಾ: ಉಭಯ ರಾಷ್ಟ್ರಗಳ ಸೇನೆ ನಡುವೆ ಮತ್ತೆ ನೇರ ದೂರವಾಣಿ ಸಂಪರ್ಕ

Published:
Updated:
ಕೊರಿಯಾ: ಉಭಯ ರಾಷ್ಟ್ರಗಳ ಸೇನೆ ನಡುವೆ ಮತ್ತೆ ನೇರ ದೂರವಾಣಿ ಸಂಪರ್ಕ

ಸೋಲ್: ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಸೇನೆಗಳ ನಡುವೆ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ನೇರ ದೂರವಾಣಿ ಸಂಪರ್ಕ ಸೇವೆಯನ್ನು ಮತ್ತೆ ಆರಂಭಿಸಲು ಎರಡೂ ರಾಷ್ಟ್ರಗಳು ಮಂಗಳವಾರ ಒಪ್ಪಿಕೊಂಡಿವೆ.

ಬದ್ಧ ವೈರಿಗಳಾದ ಈ ದೇಶಗಳ ನಡುವೆ ಎರಡು ವರ್ಷಗಳ ನಂತರ ಮೊದಲ ಬಾರಿ ಔಪಚಾರಿಕ ಮಾತುಕತೆ ನಡೆದಿದೆ.

‘ಪಶ್ಚಿಮ ಗಡಿ ಭಾಗದಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಸೇವೆ ಆರಂಭಿಸಲಾಗುವುದು’ ಎಂದು ಉತ್ತರ ಕೊರಿಯಾ ಸಚಿವ ಚುನ್ ಹೇಯ್–ಸಂಗ್ ತಿಳಿಸಿದ್ದಾರೆ. ಈ ಭಾಗದಲ್ಲಿ 2016ರ ಫೆಬ್ರುವರಿಯಿಂದ ದೂರವಾಣಿ ಸಂಪರ್ಕ ಸ್ಥಗಿತಗೊಂಡಿತ್ತು. ಪೂರ್ವ ಭಾಗದಲ್ಲಿ ನೇರ ದೂರವಾಣಿ ಸಂಪರ್ಕ 2008ರಲ್ಲೇ ಸ್ಥಗಿತಗೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry