ರಸ್ತೆ ನಿರ್ಮಾಣಕ್ಕಾಗಿ 70 ಮರಗಳು ಧರೆಗೆ

7

ರಸ್ತೆ ನಿರ್ಮಾಣಕ್ಕಾಗಿ 70 ಮರಗಳು ಧರೆಗೆ

Published:
Updated:
ರಸ್ತೆ ನಿರ್ಮಾಣಕ್ಕಾಗಿ 70 ಮರಗಳು ಧರೆಗೆ

ಬೆಂಗಳೂರು: ರಸ್ತೆ ನಿರ್ಮಾಣಕ್ಕಾಗಿ ವೈಟ್‌ಫೀಲ್ಡ್‌ ಸಮೀಪದ ಪಟ್ಟಂದೂರು ಅಗ್ರಹಾರ ಕೆರೆ ಮೀಸಲು ಪ್ರದೇಶದಲ್ಲಿದ್ದ (ಬಫರ್‌ ಜೋನ್‌) 70 ಮರಗಳನ್ನು ಮಂಗಳವಾರ ಕಡಿಯಲಾಗಿದೆ.

ವರ್ತೂರು ಕೋಡಿ ಮುಖ್ಯರಸ್ತೆಯಿಂದ ಐಟಿಪಿಎಲ್‌ನ 80 ಅಡಿ ರಸ್ತೆಗೆ ಸಂಪರ್ಕ ಕಲ್ಪಿಸಲು ರಸ್ತೆಯನ್ನು ಪಾಲಿಕೆ ನಿರ್ಮಿಸುತ್ತಿದೆ. ಇದಕ್ಕಾಗಿ 140 ಮರಗಳನ್ನು ಕಡಿಯಲು ಉದ್ದೇಶಿಸಿದೆ.

‘ಕೆರೆಯ ಮೀಸಲು ಪ್ರದೇಶದಲ್ಲಿ ನಿರ್ಮಾಣ ಚಟುವಟಿಕೆ ನಡೆಸಬಾರದು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಆದೇಶವಿದೆ. ಆದರೆ, ಪಾಲಿಕೆಯು ಕಾನೂನುಬಾಹಿರವಾಗಿ ರಸ್ತೆಯನ್ನು ನಿರ್ಮಿಸುತ್ತಿದೆ’ ಎಂದು ಸ್ಥಳೀಯ ನಿವಾಸಿ ಸಂದೀಪ್‌ ಅನಿರುದ್ಧ್‌ ಆರೋಪಿಸಿದರು.

‘ರಸ್ತೆ ನಿರ್ಮಿಸುವುದನ್ನು ಖಂಡಿಸಿ ಈ ಹಿಂದೆ ಪ್ರತಿಭಟಿಸಿದ್ದೆವು. ಇದರಿಂದ ಕೆಲಸ ನಿಲ್ಲಿಸಿದ್ದರು. ಈಗ ಪುನಃ ಆರಂಭಿಸಿದ್ದಾರೆ’ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry