15 ಕ್ರೀಡಾ ಸಾಧಕರಿಗೆ ಕೆಒಎ ಪ್ರಶಸ್ತಿ

7

15 ಕ್ರೀಡಾ ಸಾಧಕರಿಗೆ ಕೆಒಎ ಪ್ರಶಸ್ತಿ

Published:
Updated:

ಬೆಂಗಳೂರು: ರಾಜ್ಯದ 15 ಕ್ರೀಡಾ ಸಾಧಕರಿಗೆ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ (ಕೆಒಎ)ಯು ಪ್ರಶಸ್ತಿ ಪ್ರದಾನ ಮಾಡಲಿದೆ.

ಗುರುವಾರ (ಜ. 11) ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಯುವ ಕೇಂದ್ರ ‘ಯವನಿಕಾ’ದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಮಂಗಳವಾರ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದ ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್, ‘ಸತತ 15 ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಳುಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪದಕ, ಪ್ರಶಸ್ತಿ ಗೆದ್ದಿರುವ ಮತ್ತು ಕ್ರೀಡೆಗೆ ಉತ್ತಮ ಕೊಡುಗೆ ನೀಡಿರುವ ಬೇರೆ ಬೇರೆ ಕ್ಷೇತ್ರಗಳ ಕ್ರೀಡಾಪಟುಗಳನ್ನು ಸನ್ಮಾನಿಸಲಾಗುತ್ತದೆ’ ಎಂದರು.

‘ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿರುವ 11 ಕ್ರೀಡಾಪಟುಗಳಿಗೆ ತಲಾ ₹ 1 ಲಕ್ಷ ನೀಡಿ ಗೌರವಿಸಲಾಗುತ್ತಿದೆ. ಹೋದ ವರ್ಷಕ್ಕಿಂತ ಈ ಬಾರಿ ಪ್ರಶಸ್ತಿ ಮೊತ್ತವು ದುಪ್ಟಟ್ಟಾಗಿದೆ.  ಚಾಂಪಿಯನ್‌ಷಿಪ್‌ಗಳ ಯಶಸ್ವಿ ಆಯೋಜನೆ ಮಾಡಿದ ಕ್ರೀಡಾಸಂಸ್ಥೆಗಳಿಗೆ ₹ 25 ಸಾವಿರ ನಗದು ನೀಡಲಾಗುವುದು. ಹಿರಿಯ ಕ್ರೀಡಾಪಟುಗಳನ್ನು ಗೌರವಿಸಲಾಗುವುದು’ ಎಂದರು.

‘ಕೆಒಎ ಉಪಾಧ್ಯಕ್ಷ ಮೋಹನರಾಜ್, ಡಿವೈಇಎಸ್ ನಿರ್ದೇಶಕ ಅನುಪಮ್ ಅಗರವಾಲ್, ಹಾಕಿ ಕರ್ನಾಟಕ ಕಾರ್ಯದರ್ಶಿ ಎ.ಬಿ. ಸುಬ್ಬಯ್ಯ, ಕೆಒಎ ಕಾರ್ಯದರ್ಶಿ ಅನಂತರಾಜು, ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ಕಾರ್ಯದರ್ಶಿ ಎಂ. ಶ್ಯಾಮಸುಂದರ್ ಆವರಿದ್ದ ಸಮಿತಿಯು ಪ್ರಶಸ್ತಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಿದೆ’ ಎಂದು ತಿಳಿಸಿದರು.

ಪ್ರಶಸ್ತಿ ಪುರಸ್ಕೃತರು

ಹೆಸರು,                              ಕ್ರೀಡೆ/ವಿಭಾಗ

ಡೇನಿಯಲ್ ಎಸ್ ಫರೀದ್,      ಬ್ಯಾಡ್ಮಿಂಟನ್

ಅನಿಲಕುಮಾರ,                  ಬ್ಯಾಸ್ಕೆಟ್‌ಬಾಲ್

ನವೀನ್ ಜಾನ್,                 ಸೈಕ್ಲಿಂಗ್

ಪ್ರಧಾನ್ ಸೋಮಣ್ಣ,          ಹಾಕಿ

ವಿ.ಅವಿನಾಶ್,                  ಜುಡೊ,

ಶರ್ಮದಾ ಬಾಲು,           ಟೆನಿಸ್

ಬಿ. ನಿಖಿಲ್,                  ಶೂಟಿಂಗ್

ಎಂ. ಅವಿನಾಶ್,             ಈಜು

ವಿ.ಖುಷಿ,ಟೇಬಲ್          ಟೆನಿಸ್

ಸಂದೀಪ್ ಕಾಟೆ,          ಕುಸ್ತಿ

ಹೇಮಂತ್ ಸಂಪಾಜೆ,     ಮಾಧ್ಯಮ

ಸುಬ್ರಮಣಿ,                       ಹಿರಿಯ ಹಾಕಿಪಟು

ಬಾಲಾಜಿ ನರಸಿಂಹನ್,         ಹಿರಿಯ ಫುಟ್‌ಬಾಲ್ ಆಟಗಾರ

ಉದಯಕುಮಾರ್,              ಹಿರಿಯ ಟೆನಿಸ್ ಆಟಗಾರ

ಡಾ.ಕಿರಣ ಕುಲಕರ್ಣಿ,           ಕ್ರೀಡಾವೈದ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry