ಬಾರ್‌ ಪರವಾನಗಿ ರದ್ದು

7
ಎರಡನೇ ದಿನವೂ ಮುಂದುವರಿದ ಪರಿಶೀಲನೆ

ಬಾರ್‌ ಪರವಾನಗಿ ರದ್ದು

Published:
Updated:

ಬೆಂಗಳೂರು: ಕಲಾಸಿಪಾಳ್ಯದ ‘ಕೈಲಾಶ್‌ ಬಾರ್‌ ಹಾಗೂ ರೆಸ್ಟೊರೆಂಟ್‌’ನಲ್ಲಿ ಅಗ್ನಿ ಅವಘಡ ಸಂಭವಿಸಿ ಐವರು ಕೆಲಸಗಾರರು ಮೃತಪಟ್ಟ ಪ್ರಕರಣದ ‍ಪರಿಶೀಲನೆ ನಡೆಸಿದ್ದ ಬಿಬಿಎಂಪಿ ಅಧಿಕಾರಿಗಳು, ಅದರ ವಾಣಿಜ್ಯ ಪರವಾನಗಿ ರದ್ದುಪಡಿಸಿದ್ದಾರೆ.

‘ಬಾರ್‌ನಲ್ಲಿ ತಿಂಡಿ– ತಿನಿಸು ಮಾರಾಟಕ್ಕಾಗಿ ಮಾತ್ರ ವಾಣಿಜ್ಯ ಪರವಾನಗಿಯನ್ನು ಪಾಲಿಕೆ ನೀಡುತ್ತದೆ. ಸ್ವಚ್ಛತೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣಕ್ಕೆ ಈ ಪರವಾನಗಿಯನ್ನು ರದ್ದುಪಡಿಸಿದ್ದೇವ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

ನ್ಯಾಯಾಂಗ ಬಂಧನಕ್ಕೆ:  ಅವಘಡ ಸಂಬಂಧ ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದ ಬಾರ್‌ ಮಾಲೀಕ ದಯಾಶಂಕರ್‌ ಅವರ ಅಣ್ಣ ವಿ.ಆರ್‌. ಪ್ರಕಾಶ್‌, ಸ್ನೇಹಿತ ಸೋಮಶೇಖರ್‌ ಅವರನ್ನು ಸೋಮವಾರ ರಾತ್ರಿ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಮಾಹಿತಿ ಕೇಳಿ ಪತ್ರ: ‘ಕೈಲಾಶ್‌ ಬಾರ್‌ ಹಾಗೂ ರೆಸ್ಟೊರೆಂಟ್‌’ಗೆ ನೀಡಿದ್ದ ಪರವಾನಗಿ, ಅದರ ನವೀಕರಣ ಹಾಗೂ ಅಲ್ಲಿಯ ವ್ಯವಸ್ಥೆ ಬಗ್ಗೆ ವರದಿ ನೀಡುವಂತೆ ಅಬಕಾರಿ ಇಲಾಖೆ, ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಕಲಾಸಿಪಾಳ್ಯ ಠಾಣೆಯ ಪೊಲೀಸರು, ಮಂಗಳವಾರ ಪತ್ರ ಬರೆದಿದ್ದಾರೆ.

ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಬೆಸ್ಕಾಂ, ಬಿಬಿಂಎಪಿ, ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಎಲೆಕ್ಟ್ರಿಕಲ್‌ ಇನ್‌ಸ್ಪೆಕ್ಟರ್‌ ತಂಡದ ಸದಸ್ಯರು ಮಂಗಳವಾರವೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಇದುವರೆಗೂ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry