ಶ್ರೀಲಂಕಾ ತಂಡಕ್ಕೆ ಮ್ಯಾಥ್ಯೂಸ್ ನಾಯಕ

7

ಶ್ರೀಲಂಕಾ ತಂಡಕ್ಕೆ ಮ್ಯಾಥ್ಯೂಸ್ ನಾಯಕ

Published:
Updated:
ಶ್ರೀಲಂಕಾ ತಂಡಕ್ಕೆ ಮ್ಯಾಥ್ಯೂಸ್ ನಾಯಕ

ಕೊಲಂಬೊ: ಆರು ತಿಂಗಳ ಹಿಂದೆಯಷ್ಟೇ ರಾಜೀನಾಮೆ ನೀಡಿದ್ದ ಏಂಜೆಲೊ ಮ್ಯಾಥ್ಯೂಸ್ ಅವರನ್ನು ಮತ್ತೆ ಶ್ರೀಲಂಕಾದ ಟಿ–20 ಹಾಗೂ ಏಕದಿನ ಕ್ರಿಕೆಟ್‌ ತಂಡಗಳಿಗೆ ನಾಯಕರನ್ನಾಗಿ ನೇಮಕ ಮಾಡಲಾಗಿದೆ.

ಸತತ ಗಾಯದ ಸಮಸ್ಯೆ ಎದುರಿಸಿದ ಬಳಿಕ ಮ್ಯಾಥ್ಯೂಸ್ ಅವರು ಜುಲೈ ತಿಂಗಳಿನಲ್ಲಿ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 30 ವರ್ಷದ ಮ್ಯಾಥ್ಯೂಸ್ ಅವರನ್ನು ಮರುನೇಮಕ ಮಾಡಿಕೊಂಡಿರುವುದು ಆಶ್ಚರ್ಯದ ಬೆಳವಣಿಗೆ ಎನಿಸಿದೆ.

2019ರ ವಿಶ್ವಕಪ್‌ನಲ್ಲಿ ಏಂಜೆಲೊ ಮ್ಯಾಥ್ಯೂಸ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry