ಇಂದಿನಿಂದ ಅಖಿಲ ಭಾರತ ಬಿಎಸ್‌ಎನ್‌ಎಲ್‌ ಕಬಡ್ಡಿ ಟೂರ್ನಿ

7

ಇಂದಿನಿಂದ ಅಖಿಲ ಭಾರತ ಬಿಎಸ್‌ಎನ್‌ಎಲ್‌ ಕಬಡ್ಡಿ ಟೂರ್ನಿ

Published:
Updated:

ಬೆಂಗಳೂರು: 17ನೇ ಅಖಿಲ ಭಾರತ ಬಿಎಸ್‌ಎನ್‌ಎಲ್ ಕಬಡ್ಡಿ ಟೂರ್ನಿ ಬುಧವಾರದಿಂದ ನಗರದಲ್ಲಿ ಆರಂಭವಾಗಲಿದೆ.

ಕರ್ನಾಟಕ ಸರ್ಕಲ್‌ ಸ್ಪೋರ್ಟ್ಸ್‌ ಮತ್ತು ಕಲ್ಚರಲ್‌ ಬೋರ್ಡ್‌ (ಕೆಸಿಎಸ್‌ಸಿಬಿ) ವತಿಯಿಂದ ಜನವರಿ 12ರವರೆಗೆ ಕಬಡ್ಡಿ ಟೂರ್ನಿ ನಡೆಯಲಿದೆ. ಬಸವೇಶ್ವರ ಸರ್ಕಲ್‌ನಲ್ಲಿರುವ ನ್ಯೂ ಟೆಲಿಕಾಂ ಕಟ್ಟಡದ ಕ್ರೀಡಾ ಸಂಕೀರ್ಣದಲ್ಲಿ ಪಂದ್ಯಗಳು ಆಯೋಜನೆಗೊಂಡಿವೆ.

‘ಲೀಗ್‌ ಹಾಗೂ ನಾಕೌಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಕರ್ನಾಟಕ, ರಾಜಸ್ತಾನ, ಹರಿಯಾಣ, ಪಂಜಾಬ್‌, ಆಂಧ್ರಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಕೇರಳ ಸೇರಿದಂತೆ ಒಂಬತ್ತು ತಂಡಗಳು ಭಾಗವಹಿಸಲಿವೆ. ಕಾರಣಾಂತರಗಳಿಂದ ಜಾರ್ಖಂಡ್‌ ತಂಡ ಭಾಗವಹಿಸುತ್ತಿಲ್ಲ’ ಎಂದು ಕೆಸಿಎಸ್‌ಸಿಬಿ ಕಾರ್ಯದರ್ಶಿ ಗಣಪತಿ ಎಮ್‌.ಭಟ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಹಿರಿಯ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಸಿ.ಹೊನ್ನಪ್ಪ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಮುಕ್ತಾಯ ಸಮಾರಂಭಕ್ಕೆ ಹಿರಿಯ ಕಬಡ್ಡಿ ಆಟಗಾರ ಹಾಗೂ ಕೋಚ್‌ ಬಿ.ಸಿ. ರಮೇಶ್‌ ಗೌರವಾನ್ವಿತ ಅತಿಥಿಯಾಗಿದ್ದಾರೆ.

ಕರ್ನಾಟಕ ತಂಡ ಇಂತಿದೆ: ಬಿ.ಎಮ್‌.ಮಂಜುನಾಥ್‌, ಎನ್‌.ವೆಂಕಟಸ್ವಾಮಿ, ಎಸ್‌.ಪ್ರಭಾಕರ್‌ ರೆಡ್ಡಿ, ಜಿ.ಎನ್‌.ಅರ್ಜುನಪ್ಪ, ಮಹಾದೇವ, ಎಮ್‌.ಪ್ರಕಾಶ್‌, ಸಂದೀಪ್‌ ಚಾವಟಿ, ಎಚ್‌.ಎಸ್‌.ಚಾವಡ್ಕಿ, ಡಿ.ರಾಮಯ್ಯ, ಎನ್‌.ನಾಗೇಶ್‌, ಸಿ.ಪಿ ಮಹೇಶ, ಎಸ್‌.ಸುರೇಶ್‌. ಗಣಪತಿ ಎಮ್‌.ಭಟ್‌ (ಮ್ಯಾನೇಜರ್‌), ಎನ್‌.ಕುಮಾರ್‌ (ಕೋಚ್‌).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry