ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಿತ್‌ ದ್ರಾವಿಡ್‌, ಆರ್ಯನ್‌ ಶತಕದ ಸೊಬಗು

ಕ್ರಿಕೆಟ್‌: 500ರನ್‌ ಕಲೆಹಾಕಿದ ಮಲ್ಯ ಅದಿತಿ ಶಾಲೆ ತಂಡ
Last Updated 9 ಜನವರಿ 2018, 19:34 IST
ಅಕ್ಷರ ಗಾತ್ರ

ಬೆಂಗಳೂರು: ಸಮಿತ್‌ ದ್ರಾವಿಡ್‌ (150) ಹಾಗೂ ಆರ್ಯನ್ ಜೋಶಿ(154) ಅವರ ಮಿಂಚಿನ ಶತಕದ ನೆರವಿನಿಂದ ಮಲ್ಯ ಅದಿತಿ ಶಾಲೆ ತಂಡ 500ರನ್‌ ಕಲೆಹಾಕಿದೆ.

ಬಿಟಿಆರ್‌ ಕಪ್‌ಗಾಗಿ ನಗರದಲ್ಲಿ ನಡೆದ ಕೆಎಸ್‌ಸಿಎ ವತಿಯ (ಗುಂಪು 1) 14 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಲ್ಯ ಅದಿತಿ ಶಾಲೆ 412 ರನ್‌ಗಳಿಂದ ವಿವೇಕಾನಂದ ಶಾಲೆ ಎದುರು ಜಯಿಸಿತು.

ಮೊದಲು ಬ್ಯಾಟ್ ಮಾಡಿದ ಮಲ್ಯ ಅದಿತಿ ಇಂಟರ್‌ನ್ಯಾಷನಲ್ ಶಾಲೆ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 500 ರನ್ ಗಳಿಸಿದೆ. ಈ ತಂಡಲ್ಲಿರುವ ಭಾರತದ ಹಿರಿಯ ಆಟಗಾರ ರಾಹುಲ್ ದ್ರಾವಿಡ್ ಮಗ ಸಮಿತ್‌ 150 ರನ್‌ ಗಳಿಸಿ ಮಿಂಚಿ ದ್ದಾರೆ.  ಆರ್ಯನ್ ಜೋಶಿ 154 ರನ್ ಸಿಡಿಸಿದ್ದಾರೆ. ಸವಾಲಿನ ಮೊತ್ತ ಬೆನ್ನಟ್ಟಿದ ವಿವೇಕಾನಂದ ಶಾಲೆ 27.3 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 88ರನ್‌ ಗಳಿಸಿತು.

ಸ್ಕೋರು: ಮಲ್ಯ ಅದಿತಿ ಇಂಟರ್‌ನ್ಯಾಷನಲ್‌ ಶಾಲೆ: 50 ಓವರ್‌ಗಳಲ್ಲಿ 5 ವಿಕೆಟ್‌ಗೆ 500 (ಜೋಹಾನ್‌ 82, ಸಮಿತ್ ದ್ರಾವಿಡ್‌ 150, ಆರ್ಯನ್ ಜೋಶಿ 154, ಕೈವಲ್ಯ 30, ಅಕ್ಷನ್‌ 27). ವಿವೇಕಾನಂದ ಶಾಲೆ: 27.3 ಓವರ್‌ಗಳಲ್ಲಿ 88 (ಜೋಹನ್‌ 25ಕ್ಕೆ2, ಕೈವಲ್ಯ 20ಕ್ಕೆ2, ಇಶಾನ್‌ 6ಕ್ಕೆ3, ಅಗಸ್ತ್ಯಾ 4ಕ್ಕೆ2). ಫಲಿತಾಂಶ: ಮಲ್ಯ ಅದಿತಿ ಇಂಟರ್‌ನ್ಯಾಷನಲ್ ಶಾಲೆಗೆ 412 ರನ್‌ಗಳ ಜಯ.

ವಿದ್ಯಾಶಿಲ್ಪ ಅಕಾಡೆಮಿ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 248. ಸಿಂಧಿ ಶಾಲೆ, ಹೆಬ್ಬಾಳ: 48.5 ಓವರ್‌ಗಳಲ್ಲಿ 5 ವಿಕೆಟ್‌ಗೆ 252. ಫಲಿತಾಂಶ: ಸಿಂಧಿ ಶಾಲೆಗೆ 5 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT