ಕರ್ನಾಟಕ ಶುಭಾರಂಭ

7

ಕರ್ನಾಟಕ ಶುಭಾರಂಭ

Published:
Updated:
ಕರ್ನಾಟಕ ಶುಭಾರಂಭ

ವಿಜಯಪುರ: ಕರ್ನಾಟಕ ಬಾಲಕರ ತಂಡದವರು ಮಂಗಳವಾರ ಆರಂಭವಾದ ಎಸ್‌ಜಿಎಫ್‌ಐ 63ನೇ ರಾಷ್ಟ್ರಮಟ್ಟದ ಶಾಲಾ ಬಾಲಕ ಹಾಗೂ ಬಾಲಕಿಯರ 14 ವರ್ಷದೊಳಗಿನವರ ವಾಲಿಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಲೀಗ್‌ ಪಂದ್ಯದಲ್ಲಿ ರಾಜ್ಯ ತಂಡ 25–17, 25–19 ಪಾಯಿಂಟ್‌ಗಳಿಂದ ಒಡಿಶಾವನ್ನು ಮಣಿಸಿ ಕ್ರೀಡಾಪ್ರೇಮಿಗಳ ಮನಗೆದ್ದರು.

ಬಾಲಕರ ವಿಭಾಗದ ದಿನದ ಇತರ ಪಂದ್ಯಗಳಲ್ಲಿ ವಿದ್ಯಾಭಾರತಿ ತಂಡ 2–0ಯಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಮೇಲೂ, ಹರಿಯಾಣ 2–0ಯಲ್ಲಿ ಚಂಡೀಗಡ ವಿರುದ್ಧವೂ, ಆಂಧ್ರಪ್ರದೇಶ ತಂಡ 2–0ಯಲ್ಲಿ ಮಧ್ಯಪ್ರದೇಶದ ಮೇಲೂ, ಎನ್‌ವಿಎಸ್ ತಂಡ 2–0ಯಲ್ಲಿ ಸಿಬಿಎಸ್ಇ ವಿರುದ್ಧವೂ, ಉತ್ತರಾಖಂಡ 2–0ಯಲ್ಲಿ ಪಂಜಾಬ್‌ ಮೇಲೂ, ಮಣಿಪುರ 2–0ಯಲ್ಲಿ ಜಾರ್ಖಂಡ್‌ ವಿರುದ್ಧವೂ, ಬಿಹಾರ 2–0ರಲ್ಲಿ ನವದೆಹಲಿ ಮೇಲೂ ಗೆದ್ದವು.

ಬಾಲಕಿಯರ ವಿಭಾಗದಲ್ಲಿ ಹರಿಯಾಣ ತಂಡ 2–0ಯಲ್ಲಿ ಎನ್‌ವಿಎಸ್‌ ಮೇಲೂ, ಹಿಮಾಚಲಪ್ರದೇಶ 2-0ಯಲ್ಲಿ ಕೆವಿಎಸ್‌ ವಿರುದ್ಧವೂ, ಪಶ್ಚಿಮ ಬಂಗಾಳ 2-0ಯಿಂದ ಛತ್ತೀಸಗಡ ಮೇಲೂ, ತಮಿಳುನಾಡು 2-0ಯಲ್ಲಿ ಚಂಡೀಗಡದ ವಿರುದ್ಧವೂ, ಮಹಾರಾಷ್ಟ್ರ ತಂಡ 2–0ಯಲ್ಲಿ ರಾಜಸ್ಥಾನದ ಮೇಲೂ, ತೆಲಗಾಂಣ 2–0ಯಲ್ಲಿ ಸಿಬಿಎಸ್ಇ ವಿರುದ್ಧವೂ ಜಯ ಸಾಧಿಸಿದವು. ಬಹುತೇಕ ಪಂದ್ಯಗಳು ಏಕಪಕ್ಷೀಯವಾಗಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry