ಶಾಸಕ ಸ್ಥಾನಕ್ಕೆ ರಾಜೀನಾಮೆಗೆ ನಿಂಗಯ್ಯ ಚಿಂತನೆ

7

ಶಾಸಕ ಸ್ಥಾನಕ್ಕೆ ರಾಜೀನಾಮೆಗೆ ನಿಂಗಯ್ಯ ಚಿಂತನೆ

Published:
Updated:

ಕಳಸ: ಕಳಸ ಪಟ್ಟಣವನ್ನು ಕೇಂದ್ರವಾಗಿಸಿ ಕಳಸ ತಾಲ್ಲೂಕು ರಚಿಸುವ 30 ವರ್ಷಗಳ ಬೇಡಿಕೆಯನ್ನು ಮುಖ್ಯಮಂತ್ರಿ ತಿರಸ್ಕರಿಸಿದ ಕಾರಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆ ನಡೆಸುತ್ತಿರುವುದಾಗಿ ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಹೇಳಿದರು.

‘ಕಳಸಕ್ಕೆ ತಾಲ್ಲೂಕು ಪಟ್ಟ ಸಿಗುತ್ತದೆ ಎಂದು ಬಹಳ ಆಸೆಯಿಂದ ತಾಳ್ಮೆಯಿಂದ ಕಾದಿದ್ದೆವು. ಆದರೆ ಮೂಡಿಗೆರೆ ಸಮಾರಂಭದಲ್ಲಿ ಮುಖ್ಯಮಂತ್ರಿ ನಮ್ಮೆಲ್ಲರ ಆಸೆಗೆ ತಣ್ಣೀರು ಎರಚಿದರು. ಇಡೀ ಕಳಸ ಹೋಬಳಿಯ ಜನತೆಗೆ ಮುಖ್ಯಮಂತ್ರಿ ದ್ರೋಹ ಮಾಡಿದರು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry