2018ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇ 7.3ರಷ್ಟಿರಲಿದೆ: ವಿಶ್ವಬ್ಯಾಂಕ್

7

2018ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇ 7.3ರಷ್ಟಿರಲಿದೆ: ವಿಶ್ವಬ್ಯಾಂಕ್

Published:
Updated:
2018ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇ 7.3ರಷ್ಟಿರಲಿದೆ: ವಿಶ್ವಬ್ಯಾಂಕ್

ವಾಷಿಂಗ್ಟನ್: ‘ಮಹತ್ವಾಂಕ್ಷೆಯ ಸರ್ಕಾರವು ಸಮಗ್ರ ಸುಧಾರಣೆಗಳನ್ನು ಕೈಗೊಳ್ಳುತ್ತಿದ್ದು’ ಭಾರತ ಅಗಾಧ ಆರ್ಥಿಕ ಬೆಳವಣಿಗೆ ಸಾಮರ್ಥ್ಯ ಹೊಂದಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.

2018ರಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಶೇ 7.3 ಮತ್ತು ಮುಂದಿನ ಎರಡು ವರ್ಷಗಳಲ್ಲಿ ಶೇ. 7.5 ಆಗಲಿದೆ ಎಂದು ವಿಶ್ವಬ್ಯಾಂಕ್ ಭವಿಷ್ಯ ನುಡಿದಿದೆ.

ನೋಟು ರದ್ದತಿ, ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ (ಜಿಎಸ್‌ಟಿ) ತರಾತುರಿಯ ಜಾರಿಯಿಂದಾದ ಹಿನ್ನಡೆಯ ಹೊರತಾಗಿಯೂ 2017ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇ 6.7ರಷ್ಟಿರುವ ಬಗ್ಗೆ ಅಂದಾಜಿಸಲಾಗಿದೆ ಎಂದು ವಿಶ್ವಬ್ಯಾಂಕ್‌ ಮಂಗಳವಾರ ಬಿಡುಗಡೆ ಮಾಡಿರುವ 2018ರ ‘ಜಾಗತಿಕ ಆರ್ಥಿಕ ನಿರೀಕ್ಷೆ'ಯಲ್ಲಿ ಹೇಳಲಾಗಿದೆ.

‘ಮುಂದಿನ ದಶಕದಲ್ಲಿ, ಮುಂಚೂಣಿಯಲ್ಲಿರುವ ಇತರ ಎಲ್ಲ ಆರ್ಥಿಕ ಶಕ್ತಿಗಳಿಗಿಂತಲೂ ಭಾರತದ ಆರ್ಥಿಕ ಬೆಳವಣಿಗೆ ದರ ಹೆಚ್ಚಿನದ್ದಾಗಿರಲಿದೆ. ಹೀಗಾಗಿ ನಾನು ಅಲ್ಪಾವಧಿಯ ಸಂಖ್ಯೆಗಳ ಬಗ್ಗೆ ಗಮನಹರಿಸುವುದಿಲ್ಲ. ಭಾರತದ ಬೃಹತ್ ಚಿತ್ರಣದ ಬಗ್ಗೆ ಗಮನಹರಿಸುತ್ತೇನೆ. ಅದು ಅಗಾಧವಾದ ಸಾಮರ್ಥ್ಯ ಹೊಂದಿದೆ’ ಎಂದು ವಿಶ್ವಬ್ಯಾಂಕ್‌ನ ಅಭಿವೃದ್ಧಿ ಮುನ್ಸೂಚನೆ ತಂಡದ ನಿರ್ದೇಶಕ ಅಯಾಹಾನ್ ಕೋಸ್ ಸಂದರ್ಶನವೊಂದರಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಚೀನಾ ಜತೆ ಹೋಲಿಸಿದರೆ ಭಾರತವೇ ಹೆಚ್ಚು ವೇಗದಲ್ಲಿ ಆರ್ಥಿಕ ಬೆಳವಣಿಗೆ ಹೊಂದಲಿದೆ ಎಂಬುದು ವಿಶ್ವಬ್ಯಾಂಕ್‌ನ ನಿರೀಕ್ಷೆ ಎಂಬುದಾಗಿಯೂ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry