‘ರೈತರ ಹಿತ ಕಡೆಗಣಿಸಿದ ಸರ್ಕಾರ’

7

‘ರೈತರ ಹಿತ ಕಡೆಗಣಿಸಿದ ಸರ್ಕಾರ’

Published:
Updated:

ಕವಿತಾಳ: ರೈತರ ಹಿತ ಕಡೆಗಣಿಸಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಹುರಾಷ್ಟ್ರೀಯ ಕಂಪೆನಿಗಳಿಗೆ ಸಹಾಯ ಮಾಡುತ್ತಿವೆ ಎಂದು ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯ ರಾಜ್ಯ ಘಟಕದ ಗೌರವ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ ದೂರಿದರು. ಸಮೀಪದ ಅಮೀನಗಡ ಗ್ರಾಮದಲ್ಲಿ ಸಂಘಟನೆಯ ಗ್ರಾಮ ಘಟಕವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷಿ ಚಟುವಟಿಕೆಯಲ್ಲಿ ಯಂತ್ರಗಳ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ಸರ್ಕಾರಗಳು ಬಹುರಾಷ್ಟ್ರೀಯ ಕಂಪೆನಿಗಳ ಒತ್ತಾಸೆಗೆ ಮಣಿದು ರೈತರು ಮತ್ತು ಭೂಮಿಗೆ ಮಾರಕವಾಗುವಂತ ಬಿತ್ತನೆ ಬೀಜ ಹಾಗೂ ರಾಸಾಯನಿಕಗಳನ್ನು ಒದಗಿಸುವ ಮೂಲಕ ರೈತರನ್ನು ಅಸಹಾಯಕರನ್ನಾಗಿ ಮಾಡಿವೆ’ ಎಂದರು.

ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಮಾತನಾಡಿ, ‘ಸಂಘಟನೆ ಯಾವುದೇ ರಾಜಕೀಯ ಪಕ್ಷಗಳ ಬಗ್ಗೆ ಒಲವು ಹೊಂದಿಲ್ಲ ಕೇವಲ ರೈತರ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಹೋರಾಟ ನಡೆಸುತ್ತಿದೆ ಎಂದರು.

ರೈತ ಮುಖಂಡರಾದ ಭೀಮರಾವ್, ಸಿದ್ದರಾಮಸ್ವಾಮಿ, ವೀರನಗೌಡ, ಬಸವರಾಜ ಮಲ್ಲಿನಮಡಗು, ಮಲ್ಲನಗೌಡ, ಬಸವರಾಜ ನವಲಕಲ್, ಚಂದಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಮರೇಗೌಡ, ಶಫೀಕ್, ಸಗರಪ್ಪ ಈಚನಾಳ ಉಪಸ್ಥಿತರಿದ್ದರು. ಪದಾಧಿಕಾರಿಗಳ ಆಯ್ಕೆ: ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯ ಅಮೀನಗಡ ಗ್ರಾಮ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಹುಚ್ಚರಡ್ಡಿ ಹರ್ವಾಪುರ (ಗೌರವ ಅಧ್ಯಕ್ಷ), ಅಮರೇಶ ಈಚನಾಳ (ಅಧ್ಯಕ್ಷ), ಅಬ್ದುಲ್‌ ಗನಿ (ಉಪಾಧ್ಯಕ್ಷ), ನರಸಿಂಗಪ್ಪ ಪೂಜಾರಿ (ಕಾರ್ಯದರ್ಶಿ), ಹಳ್ಳದಪ್ಪ ಅಂಗಡಿ, ಈರಪ್ಪ ನಾಯಕ, ನರಸನಗೌಡ ಈಳಿಗೇರ, ಮೌನೇಶ ಬಡಿಗೇರ, ಅಯ್ಯನಗೌಡ, ಗಿರಿಯಪ್ಪ, ತಿಪ್ಪಣ್ಣ ಬಾರಿಕೇರ, ದ್ಯಾಮಣ್ಣ ಪೂಜಾರಿ, ವೆಂಕಟೇಶ ದಾಸರ, ಅಮರೇಶ ಅಂಕುಶದೊಡ್ಡಿ, ಹುಚ್ಚರಡ್ಡಿ ಗುಂಜಳ್ಳಿ, ಲಕ್ಷ್ಮೀಪತಿ ಛಲವಾದಿ, ರವಿ ನಿರೋಳಿ, ಮಹಿಪಾಲರಡ್ಡಿ, ಭೀಮರಾಯ, ಹನುಮನಗೌಡ, ಶಿವರಾಜ, ವಿರೇಶ ಮೇಟಿ, ಕನಕಪ್ಪ ತಳವಾರ, ಅಮರಪ್ಪ ಹೋಳಿ, ಪ್ರಭುರಾಯ ನಾಗಡದಿನ್ನಿ ಮತ್ತು ಪಂಪಾಪತಿ ಗಡಗಲ್ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry