ಬಾಡಿಗೆ ಕಟ್ಟದ ನಟಿ ಮಲ್ಲಿಕಾ ಶೆರಾವತ್: ಮನೆ ತೆರವಿಗೆ ಫ್ರಾನ್ಸ್ ಕೋರ್ಟ್ ಆದೇಶ

7

ಬಾಡಿಗೆ ಕಟ್ಟದ ನಟಿ ಮಲ್ಲಿಕಾ ಶೆರಾವತ್: ಮನೆ ತೆರವಿಗೆ ಫ್ರಾನ್ಸ್ ಕೋರ್ಟ್ ಆದೇಶ

Published:
Updated:
ಬಾಡಿಗೆ ಕಟ್ಟದ ನಟಿ ಮಲ್ಲಿಕಾ ಶೆರಾವತ್: ಮನೆ ತೆರವಿಗೆ ಫ್ರಾನ್ಸ್ ಕೋರ್ಟ್ ಆದೇಶ

ಪ್ಯಾರಿಸ್‌: ಮನೆ ಬಾಡಿಗೆ ಪಾವತಿಸಿಲ್ಲ ಎಂದು ಬಾಲಿವುಡ್‌ ನಟಿ ಮಲ್ಲಿಕಾ ಶೆರಾವತ್‌ ಅವರನ್ನು ಫ್ರಾನ್ಸ್‌ ಕೋರ್ಟ್‌ ಮನೆ ತೊರೆಯುವಂತೆ ಆದೇಶಿಸಿದೆ.

ಪ್ಯಾರಿಸ್‌ನಲ್ಲಿ ನೆಲೆಸಿರುವ ಮಲ್ಲಿಕಾ ಶರಾವತ್ ದಂಪತಿ ಪ್ಲ್ಯಾಟ್ ಬಾಡಿಗೆ ₹ 59 ಲಕ್ಷ (78,787 ಯೂರೋ) ಪಾವತಿಸಿಲ್ಲ ಎಂದು ಆರೋಪಿಸಿ ಪ್ಲ್ಯಾಟ್‌ ಮಾಲೀಕ ಪ್ಯಾರಿಸ್ ಕೋರ್ಟ್‌ ಮೊರೆ ಹೋಗಿದ್ದರು.

ಮಲ್ಲಿಕಾ ಮತ್ತು ಪತಿ ಸಿರಿಲ್ಲೆ ಆಕ್ಸನ್ಫನ್ಸ್ 2017ರ ಜ.1ರಿಂದ ಪ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದಾರೆ. ಮಲ್ಲಿಕಾ ಶೆರಾವತ್ ಅವರು ₹ 59 ಲಕ್ಷ ಬಾಡಿಗೆ ಪಾವತಿಸಬೇಕು ಎಂದು ದೂರುದಾರರು ಆರೋಪಿಸಿದ್ದಾರೆ.

ಈ ಕುರಿತು ಕಳೆದ ಡಿ.14ರಂದು ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ಪ್ಯಾರಿಸ್ ಕೋರ್ಟ್‌ ಮಲ್ಲಿಕಾ ಶರಾವತ್ ಹಾಗೂ ಪತಿ  ಸಿರಿಲ್ಲೆ ಆಕ್ಸನ್ಫನ್ಸ್ ಅವರಿಗೆ ಕೂಡಲೇ ಬಾಡಿಗೆ ಪಾವತಿ ಮಾಡುವಂತೆ ಆದೇಶಿಸಿತ್ತು. ಆದರೆ ಮಲ್ಲಿಕಾ ಪತಿ ಕೋರ್ಟ್ ಆದೇಶದಂತೆ ಹಣ ನೀಡಿದರಾದರೂ, ಕೇವಲ ₹ 2 ಲಕ್ಷ (2,715 ಯೂರೋ) ಮಾತ್ರ ನೀಡಿದ್ದರು.

ಈ ಬಗ್ಗೆ ಮತ್ತೆ ಫ್ಲ್ಯಾಟ್ ಮಾಲೀಕ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಬಾಡಿಗೆ ಪಾವತಿ ಮಾಡದ ಕಾರಣ ಪ್ಯಾರಿಸ್ ಕೋರ್ಟ್ ಮಲ್ಲಿಕಾ ಮತ್ತು ಅವರ ಪತಿಯನ್ನು ಮನೆಯಿಂದ ಹೊರಗೆ ಹೋಗುವಂತೆ ಸೂಚಿಸಿದೆ. ಜತೆಗೆ, ಅವರ ಮನೆಯ ಪೀಠೋಪಕರಣಗಳನ್ನು ಜಪ್ತಿ ಮಾಡಲು ನಿರ್ದೇಶನ ನೀಡಿದ್ದು, ಬಾಡಿಗೆ ರೂಪದಲ್ಲಿ ಬರಬೇಕಿರುವ ಹಣವನ್ನು ಇದರ ಮೂಲಕ ಸ್ವೀಕರಿಸುವಂತೆ ಮಾಲೀಕರಿಗೆ ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry