ಧಾರ್ಮಿಕ ಕೇಂದ್ರಗಳಿದ್ದರೆ ನೆಮ್ಮದಿ

7

ಧಾರ್ಮಿಕ ಕೇಂದ್ರಗಳಿದ್ದರೆ ನೆಮ್ಮದಿ

Published:
Updated:

ಶನಿವಾರಸಂತೆ: ‘ಗ್ರಾಮಗಳಲ್ಲಿ ಗುಡಿಗೋಪುರ, ಧಾರ್ಮಿಕ ಕೇಂದ್ರ ಹಾಗೂ ವಿದ್ಯಾಸಂಸ್ಥೆಗಳಿದ್ದರೆ ನೆಮ್ಮದಿ ಇರುತ್ತದೆ’ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಭಿಪ್ರಾಯಪಟ್ಟರು. ಸಮೀಪದ ನಿಲುವಾಗಿಲು ಗ್ರಾಮದಲ್ಲಿ ಬಾಲ ತ್ರಿಪುರಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ, ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ದೇವರ ಬಗೆಗಿನ ಭಯ, ಭಕ್ತಿ ಹಾಗೂ ಆಧ್ಯಾತ್ಮಿಕ ಚಿಂತನೆ ಜನರಲ್ಲಿ ಇರಬೇಕು ಎಂದು ಅಭಿಪ್ರಾಯಪಟ್ಟರು.

ಬಾಲ ತ್ರಿಪುರಸುಂದರಿ ಅಮ್ಮನವರ ದೇವಾಲಯದ ರಸ್ತೆ ಅಭಿವೃದ್ಧಿ ಕಾಮಗಾರಿ ಗಳಿಗೆ ಈಗ ₹ 1 ಕೋಟಿ ಅನುದಾನ ಬಿಡುಗಡೆ ಆಗಿದ್ದು, ಕಾಮ ಗಾರಿ ಪ್ರಗತಿಯಲ್ಲಿದೆ.

ಅಭಿವೃದ್ಧಿ ಮತ್ತು ಸಮುದಾಯಭವನ ನಿರ್ಮಿಸಲು ಇನ್ನೂ ಹೆಚ್ಚಿನ ಅನುದಾನ ತರಲು ಯತ್ನಿಸು ತ್ತೇವೆ ಎಂದು ಭರವಸೆ ನೀಡಿದರು.

ಸಮಾರಂಭ ಉದ್ಘಾಟಿಸಿದ ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ ಅವರು, ಎಲ್ಲರೂ ಧರ್ಮದ ಹಾದಿಯಲ್ಲಿ ಸಾಗಿದರೆ ಸಂಸ್ಕಾರ ಹೆಚ್ಚುತ್ತದೆ. ಧಾರ್ಮಿಕ, ಅಧ್ಯಾತ್ಮ ಚಿಂತನೆಯಿಂದ ಅಂತರಂಗ ಶುದ್ಧಿಯಾಗುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಪಿ.ಪುಟ್ಟರಾಜ್ ಅವರು, ದೇವಾಲ ಯಕ್ಕೆ ಕುಡಿಯುವ ನೀರಿನ ಸೌಲಭ್ಯ ಸೇರಿ ಸರ್ವಾಂಗೀಣ ಪ್ರಗತಿಗೆ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಯತ್ನಿಸಲಾಗುವುದು ಎಂದು ಹೇಳಿದರು.

ನಿವೃತ್ತ ಐಎಎಸ್ ಅಧಿಕಾರಿ ವಿರೂಪಾಕ್ಷಯ್ಯ, ಮುಖಂಡರಾದ ಚಂದ್ರಮೌಳಿ, ಗಣೇಶ್ ಮಹದೇವಪ್ರಸಾದ್, ಮಲ್ಲೇಶ್ ಗೌಡ, ಜಿ.ಪಂ ಮಾಜಿ ಸದಸ್ಯ ಡಿ.ಬಿ.ಧರ್ಮಪ್ಪ,ದೇಗುಲ ಸಮಿತಿ ಮಾಜಿ ಅಧ್ಯಕ್ಷ ರಾಜಶೇಖರ್ ಮಾತನಾಡಿದರು.

ದೇವಾಲಯ ಸಮಿತಿ ಅಧ್ಯಕ್ಷ ವರಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಶಾಂತೇಶ್, ಧರ್ಮಪ್ಪ, ರಾಜಶೇಖರ್, ರಾಜೇಗೌಡ, ಪ್ರಧಾನ ತಂತ್ರಿ ಸುನೀಲ್, ಶಿವಕುಮಾರ್ ಹಾಗೂ ಇತರ ಪ್ರಮುಖರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry