ನಾಣಯ್ಯ ಮನೆಗೆ ಸಿದ್ದರಾಮಯ್ಯ ಭೇಟಿ

7

ನಾಣಯ್ಯ ಮನೆಗೆ ಸಿದ್ದರಾಮಯ್ಯ ಭೇಟಿ

Published:
Updated:
ನಾಣಯ್ಯ ಮನೆಗೆ ಸಿದ್ದರಾಮಯ್ಯ ಭೇಟಿ

ಮಡಿಕೇರಿ: ಜೆಡಿಎಸ್‌ ಹಿರಿಯ ಮುಖಂಡ ಎಂ.ಸಿ.ನಾಣಯ್ಯ ಅವರ ನಿವಾಸಕ್ಕೆ ಮಂಗಳವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿನೀಡಿ ಚರ್ಚಿಸಿದರು. ನಾಣಯ್ಯ ಅವರು ಜೆಡಿಎಸ್‌ ತೊರೆಯಲು ಮುಂದಾಗಿರುವ ಕಾರಣ ಈ ಭೇಟಿ ಕುತೂಹಲ ಮೂಡಿಸಿದೆ. 20 ನಿಮಿಷ ಮಾತುಕತೆ ನಡೆಸಿದರು.

‘ನಾಣಯ್ಯ ಅವರು ನನ್ನ ಆತ್ಮೀಯರು. ಅವರ ಆರೋಗ್ಯ ವಿಚಾರಿಸಲು ಭೇಟಿ ನೀಡಿದ್ದು, ರಾಜಕೀಯವಾಗಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ‘ರಾಜಕೀಯ ನಿಂತ ನೀರಲ್ಲ; ಅದು ಹರಿಯುತ್ತದೆ’ ಎಂದು ನಾಣಯ್ಯ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry