‘ಕಾಂಗ್ರೆಸ್‌ ನಡಿಗೆ ವಿಜಯದ ಕಡೆಗೆ’ ಇಂದು

7

‘ಕಾಂಗ್ರೆಸ್‌ ನಡಿಗೆ ವಿಜಯದ ಕಡೆಗೆ’ ಇಂದು

Published:
Updated:

ಬೀದರ್: ಬೀದರ್‌ ದಕ್ಷಿಣ ಕ್ಷೇತ್ರ, ಔರಾದ್‌ ಹಾಗೂ ಬಸವಕಲ್ಯಾಣದಲ್ಲಿ ಜನವರಿ 10 ರಂದು ‘ಕಾಂಗ್ರೆಸ್‌ ನಡಿಗೆ ವಿಜಯದ ಕಡೆಗೆ’ ಕಾರ್ಯಕ್ರಮ ನಡೆಯಲಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ತಿಳಿಸಿದ್ದಾರೆ.

ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ, ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲ ಭಾಗವಹಿಸುವರು ಎಂದು ಅವರು ಹೇಳಿದ್ದಾರೆ.

ಚುನಾವಣೆ: ಬಿಜೆಪಿ ಸಂಚಾಲಕರ ನೇಮಕ

ಬೀದರ್: ಮುಂಬರುವ ವಿಧಾನಸಭಾ ಚುನಾವಣೆ ಪ್ರಯುಕ್ತ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಸಂಚಾಲಕರನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ತಿಳಿಸಿದ್ದಾರೆ.

ಮಲ್ಲಿಕಾರ್ಜುನ ಪಾಟೀಲ ಮುತ್ತಂಗಿ (ಬೀದರ್), ಅಶೋಕ ಮಡ್ಡೆ (ಔರಾದ್), ಪ್ರಕಾಶ ಅಲ್ಮಾಜೆ (ಭಾಲ್ಕಿ), ಪ್ರಕಾಶ ಮಾಶೆಟ್ಟಿ (ಬೀದರ್‌ ದಕ್ಷಿಣ), ರಾಜಕುಮಾರ ಸಿರಗಾಪುರೆ (ಹುಮನಾಬಾದ್‌), ಗಜೇಂದ್ರ ಕನಕಟ್‍ಕರ್ (ಬಸವಕಲ್ಯಾಣ).

ಮಡಿವಾಳ ಸಂಘಕ್ಕೆ ಆಯ್ಕೆ

ಬೀದರ್‌: ಮಡಿವಾಳ ಸಂಘದ ಬೀದರ್‌ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಗರದ ದೇವಿ ಕಾಲೊನಿಯಲ್ಲಿ ಸೋಮವಾರ ನಡೆದ ಸಂಘದ ಸಭೆಯಲ್ಲಿ ಈ ನೇಮಕ ಮಾಡಲಾಗಿದೆ.

ಸಾಯಿನಾಥ ಮಡಿವಾಳ (ಅಧ್ಯಕ್ಷ), ರಮೇಶ ದರ್ಗಾಪುರೆ(ಗೌರವಾಧ್ಯಕ್ಷ), ಬಸವರಾಜ (ಪ್ರಧಾನ ಗೌರವಾಧ್ಯಕ್ಷ), ಸಂಗಮೇಶ ಸಿದ್ದೇಶ್ವರ, ಗೋಪಾಲ ಮಡಿವಾಳ ಮೈಲೂರ (ಉಪಾಧ್ಯಕ್ಷರು), ಶ್ರೀನಿವಾಸ ಮಡಿವಾಳ (ಪ್ರಧಾನ ಕಾರ್ಯದರ್ಶಿ), ಶಿವಕುಮಾರ ಮಡಿವಾಳ (ಖಜಾಂಚಿ), ಸಂಜುಕುಮಾರ ಕೋಟೆ (ಸಂಘಟನಾ ಕಾರ್ಯದರ್ಶಿ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry