‘ಪರಿ’ ಚಿತ್ರದ ಟೀಸರ್‌ ಬಿಡುಗಡೆ: ಪ್ರತೀಕಾರದ ಲುಕ್‌ನಲ್ಲಿ ಮಿಂಚಿರುವ ಅನುಷ್ಕಾ ಶರ್ಮಾ

7

‘ಪರಿ’ ಚಿತ್ರದ ಟೀಸರ್‌ ಬಿಡುಗಡೆ: ಪ್ರತೀಕಾರದ ಲುಕ್‌ನಲ್ಲಿ ಮಿಂಚಿರುವ ಅನುಷ್ಕಾ ಶರ್ಮಾ

Published:
Updated:
‘ಪರಿ’ ಚಿತ್ರದ ಟೀಸರ್‌ ಬಿಡುಗಡೆ: ಪ್ರತೀಕಾರದ ಲುಕ್‌ನಲ್ಲಿ ಮಿಂಚಿರುವ ಅನುಷ್ಕಾ ಶರ್ಮಾ

ಮುಂಬೈ: ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ತಾವು ಅಭಿನಯಿಸಿರುವ ‘ಪರಿ’ ಸಿನಿಮಾದ ಟೀಸರ್‌ ಅನ್ನು ಟ್ವಿಟರ್‌ ಖಾತೆಯಲ್ಲಿ ಬಿಡುಗಡೆ ಮಾಡಿಕೊಂಡಿದ್ದಾರೆ.

‘ಪರಿ’ಯ ನಿರ್ಮಾಪಕಿಯೂ ಆಗಿರುವ ಅನುಷ್ಕಾ, ಶೋಷಿತ ಹೆಣ್ಣುಮಗಳು ಪ್ರತೀಕಾರಕ್ಕೆ ನಿಂತಂತೆ ಟೀಸರ್‌ನಲ್ಲಿ ಕಾಣುತ್ತಿದ್ದಾರೆ. 2017ರ ಜುಲೈನಲ್ಲಿ ‘ಪರಿ’ ಸಿನಿಮಾದ ಪೋಸ್ಟರ್‌ನ ಫಸ್ಟ್‌ ಲುಕ್‌ ಅನ್ನು ಬಿಡುಗಡೆ ಮಾಡಲಾಗಿತ್ತು.

‘ಗ್ಲಾಮರ್, ಮೇಕಪ್ ಇಲ್ಲದ ಈ ಫೋಟೊ ಅನುಷ್ಕಾ ಅವರ ಅಭಿನಯ ಕಲೆಯ ವಿಸ್ತರಣೆಯಂತೆ ಕಾಣುತ್ತದೆ. ‘ರಬ್‌ ನೆ ಬನಾದಿ ಜೋಡಿ’ ಸಿನಿಮಾದಿಂದಲೂ ವಿಭಿನ್ನ ಪಾತ್ರಗಳಲ್ಲಿ ತೊಡಗಿಕೊಂಡ ಅನುಷ್ಕಾ ‘ಪರಿ’ಯಲ್ಲೂ ಪ್ರಯೋಗ ಮಾಡಿದ್ದಾರೆ.

ಬೆಂಗಾಲಿ ಕಲಾವಿದ ಪರಮ್ರತಾ ಚಟರ್ಜಿ ‘ಪರಿ’ಯಲ್ಲಿ ಮುಖ್ಯಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಪರಮ್ರತಾ ಈ ಹಿಂದೆ ವಿದ್ಯಾ ಬಾಲನ್ ಜತೆ ‘ಕಹಾನಿ’ ಸಿನಿಮಾದಲ್ಲಿ ಅಭಿನಯಿಸಿದ್ದರು. ‘ಪರಿ’ ಸಿನಿಮಾವನ್ನು ಬಂಗಾಲ ಮೂಲದ ಪ್ರಾಸಿಟ್ ರಾಯ್ ನಿರ್ದೇಶಿಸಿದ್ದು, ಚಿತ್ರೀಕರಣ ಮುಂಬೈ, ಕೋಲ್ಕತ್ತಾದಲ್ಲಿ ನಡೆದಿದೆ.

ಅನುಷ್ಕಾ ಅವರ ‘ಕ್ಲೀನ್ ಸ್ಲೇಟ್ ಫಿಲಂಸ್‌’ನಿಂದ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾ ‘ಪರಿ’. ಈ ಮೊದಲು ‘ಎನ್‌ಎಚ್ 10’ ಹಾಗೂ ‘ಫಿಲ್ಲೌರಿ’ ಸಿನಿಮಾಕ್ಕೆ ಅನುಷ್ಕಾ ನಿರ್ಮಾಪಕರಾಗಿದ್ದರು.

ಇದೀಗ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಮಾರ್ಚ್‌ 2ರಂದು ಚಿತ್ರ ಬಿಡುಗಡೆ ಮಾಡಲು ಮುಂದಾಗಿದೆ.

ಕಳೆದ ಡಿ.11ರಂದು ಅನುಷ್ಕಾ ಶರ್ಮಾ, ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿಯೊಂದಿಗೆ ವಿವಾಹವಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry