‘ಮಲೆನಾಡು ಗಿಡ್ಡ ತಳಿ ಸಂರಕ್ಷಣೆಗಾಗಿ ದತ್ತು’

7

‘ಮಲೆನಾಡು ಗಿಡ್ಡ ತಳಿ ಸಂರಕ್ಷಣೆಗಾಗಿ ದತ್ತು’

Published:
Updated:

ಮೂಡಿಗೆರೆ: ದೇಶಿಯ ತಳಿ ಮಲೆನಾಡು ಗಿಡ್ಡ ಹಸುವನ್ನು ಸಂರಕ್ಷಿಸುವ ಸಲುವಾಗಿ ರಾಮಚಂದ್ರಪುರ ಮಠದಿಂದ ಮಲೆನಾಡು ಗಿಡ್ಡ ತಳಿಯನ್ನು ದತ್ತು ತೆಗೆದುಕೊಳ್ಳಲಾಗುವುದು ಎಂದು ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ತಿಳಿಸಿದರು. ಪಟ್ಟಣಕ್ಕೆ ಗೋರಕ್ಷಾ ಯಾತ್ರೆಗಾಗಿ ಮಂಗಳವಾರ ಆಗಮಿಸಿದ ಅವರು, ಲಯನ್ಸ್‌ ವೃತ್ತದಲ್ಲಿ ಗೋ ರಕ್ಷಣೆ ಕುರಿತು ಮಾತನಾಡಿದರು.

ದೇಶಿಯ ತಳಿಗಳಲ್ಲಿ ಮಲೆನಾಡುಗಿಡ್ಡವು ವಿಶೇಷವಾಗಿದ್ದು. ಈ ತಳಿಯ ರಕ್ಷಣೆಗೆ ಸರ್ಕಾರಗಳು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ, ಆದುದ್ದರಿಂದ ಈ ತಳಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸಲು ಮಠದ ವತಿಯಿಂದ ತಳಿ ಸಂರಕ್ಷಣೆ ಮಾಡಲಾಗುವುದು. ಇದನ್ನು ಗೋರಕ್ಷಾ ಯಾತ್ರೆಯ ಸಮಾರೋಪದಲ್ಲಿ ಅಧೀಕೃತವಾಗಿ ದತ್ತು ಪಡೆಯಲಾಗುತ್ತದೆ ಎಂದರು.

ಗೋರಕ್ಷೆಗಾಗಿ ಆಂದೋಲನಗಳು ನಡೆಯುತ್ತಿದ್ದಂತೆ ಗೋಹತ್ಯೆಯ ಪ್ರಮಾಣ ಕೂಡ ಕಡಿಮೆಯಾಗಿದ್ದು, ಬೆಂಗಳೂರಿನ ಶಿವಾಜಿ ನಗರದಲ್ಲಿ ಮುಸ್ಲಿಂ ಹಬ್ಬಗಳಲ್ಲಿ ಹಿಂದೆ 15 ಸಾವಿರ ಗೋವುಗಳನ್ನು ಹತ್ಯೆ ಮಾಡಲಾಗುತ್ತಿತ್ತು. ಆದರೆ ಇದೀಗ ಅದರ ಪ್ರಮಾಣ ಎರಡುವರೆ ಸಾವಿರಕ್ಕೆ ಇಳಿದಿದೆ ಎಂದರು.

ದೇಶೀಯ ಗೋವಿನಲ್ಲಿ ಔಷಧಿಯ ಗುಣಗಳಿದ್ದು, ಎಲ್ಲಾ ಧರ್ಮದವರು ಈ ದೇಶಿಯ ತಳಿ ಗೋವುಗಳನ್ನು ಸಂರಕ್ಷಿಸಲು ಕೈ ಜೋಡಿಸಬೇಕು ಎಂದರು. ಜಿಲ್ಲೆಯಲ್ಲಿ 50 ಸಾವಿರ ಮಂದಿ ಗೋರಕ್ಷೆಗಾಗಿ ಅಭಯಕ್ಷರ ನೀಡಿದ್ದು, ದೇಶದ ಎಲ್ಲಾ ಜನರು ಈ ಅಭಯಕ್ಷರದಲ್ಲಿ ಪಾಲ್ಗೊಂಡು, ಅಭಯಕ್ಷರ ಸಂಗ್ರಹ ಮಾಡಿ, ಅದನ್ನು ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಕಳುಹಿಸುವ ಮೂಲಕ ಗೋವುಗಳನ್ನು ಸಂರಕ್ಷಿಸಲು ಮುಂದಾಗಬೇಕು ಎಂದರು.

ಯಾತ್ರೆಯ ಅಂಗವಾಗಿ ಮಂಗಳವಾರ ರಾತ್ರಿ ಬೀಜುವಳ್ಳಿಯಲ್ಲಿ ತಂಗಲಿರುವ ಯಾತ್ರೆ, ಬುಧವಾರ ಮಧ್ಯಾಹ್ನ ತಾಲ್ಲೂಕಿನಿಂದ ಹಾಸನಕ್ಕೆ ತೆರಳಲಿದೆ.

ಯಾತ್ರೆಯಲ್ಲಿ ಕೆ. ಮಂಚೇಗೌಡ, ನಿರ್ಮಲಮಂಚೇಗೌಡ, ಕ.ದಾ. ಕೃಷ್ಣರಾಜ್‌, ವಿನೋದ್‌ಕಣಚೂರು, ದೀಪಕ್‌ದೊಡ್ಡಯ್ಯ, ಆನಂದಕಣಚೂರು, ಪರೀಕ್ಷಿತ್‌ ಮುಂತಾವರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry