ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ನೀಡಿ, ಜೀವನ ನಿರ್ವಹಣೆಗೆ ಸಹಕರಿಸಿ

Last Updated 10 ಜನವರಿ 2018, 9:12 IST
ಅಕ್ಷರ ಗಾತ್ರ

ದಾವಣಗೆರೆ: ರೇಷ್ಮೆ ಇಲಾಖೆಯಲ್ಲಿ ಕೆಲಸ ಮಾಡುವ ಈ ನೌಕರರಿಗೆ ಕಳೆದ ಆರು ತಿಂಗಳಿಂದ ವೇತನ ಸಿಕ್ಕಿಲ್ಲ. ದಾವಣಗೆರೆಯ ತೋಳಹುಣಸೆ, ಚಾಮರಾಜನಗರ ಒಳಗೊಂಡಂತೆ ಜಿಲ್ಲೆಯ ಕೊಳ್ಳೇಗಾಲ, ಸಂತೇಮರಹಳ್ಳಿ, ಮಾಂಬಹಳ್ಳಿ, ಮುಡಿಗುಂಡದಲ್ಲಿ ರೇಷ್ಮೆ ನೂಲು ಬಿಚ್ಚುವ ಕೆಲ ಕಿರುಘಟಕಗಳಲ್ಲಿ ಕೆಲಸ ಮಾಡುತ್ತಿರುವ ಈ ನೌಕರರಿಗೆ ಈಗ ಜೀವನ ನಿರ್ವಹಣೆಯೇ ಸಮಸ್ಯೆ ಆಗಿದೆ.

ಇವರೆಲ್ಲರೂ ನಷ್ಟದಲ್ಲಿದ್ದ ರಾಜ್ಯದ ಆರು ರೇಷ್ಮೆ ಕಾರ್ಖಾನೆಗಳ ನೌಕರರು. ರೇಷ್ಮೆ ಇಲಾಖೆಯ ಅಧಿಕಾರಿಗಳು ಕಾರ್ಖಾನೆಗಳನ್ನು ಲೇ ಆಫ್‌ ಎಂದು ಘೋಷಿಸಿ, ಇವರನ್ನು ಇತರೆ ಜಿಲ್ಲೆಯ ಅದೇ ಇಲಾಖೆಗೆ ವರ್ಗಾವಣೆ ಮಾಡಿದ್ದರು. ಇವರೆಲ್ಲರಿಗೂ ಈಗ ಪ್ರತಿ ತಿಂಗಳು ಸಂಬಳ ಆಗುತ್ತಿಲ್ಲ.

ಕಾರ್ಖಾನೆಗಳು ನಷ್ಟದಲ್ಲಿವೆ. ಯಂತ್ರೋಪಕರಣಗಳು ಹಳೆಯ ದಾಗಿದ್ದು, ಅವುಗಳ ಪುನಶ್ಚೇತನಕ್ಕಾಗಿ ಹೆಚ್ಚಿನ ಸಮಯದ ಅಗತ್ಯವಿದೆ ಎಂದು ಹೇಳಿ ಇಲಾಖೆಯ ಅಧಿಕಾರಿಗಳು ಆ ಕಾರ್ಖಾನೆಗಳನ್ನು ಸ್ಥಗಿತಗೊಳಿಸಿ ವಿವಿಧೆಡೆಯಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 214 ನೌಕರರಿಗೆ ಲೇ ಆಫ್‌ ನೀಡಿತು. ನಂತರ ಕೆಲ ನೌಕರರಿಗೆ ‘ಅನ್ಯ ಕಾರ್ಯ ನಿಮಿತ’ ಎಂಬ ಆದೇಶ ನೀಡಿ ಅವರನ್ನು ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಜಿಲ್ಲೆಗಳಲ್ಲಿನ ರೇಷ್ಮೆ ಇಲಾಖೆಗೆ ವರ್ಗಾಹಿಸಲಾಯಿತು ಎನ್ನುತ್ತವೆ ಇಲಾಖೆ ಮೂಲಗಳು.

‘ತಾಲ್ಲೂಕಿನ ತೋಳಹುಣಸೆ ಗ್ರಾಮದಲ್ಲಿನ ಸರ್ಕಾರಿ ರೇಷ್ಮೆ ನೂಲು ಬಿಚ್ಚುವ ಕಿರುಘಟಕದಲ್ಲಿ ರೀಲರ್‌ ಆಗಿ ಕೆಲಸಕ್ಕೆ ಸೇರಿಕೊಂಡೆವು. 1988ರಲ್ಲಿ ಎಲ್ಲಾ ಕಾರ್ಮಿಕರನ್ನು ಖಾಯಂ ಮಾಡಲಾಯಿತು. 2013 ರಲ್ಲಿ ತೋಳಹುಣಸೆಯ ಕಿರುಘಟಕವನ್ನು ನಷ್ಟದ ಕಾರಣ ನೀಡಿ ಸ್ಥಗಿತಗೊಳಿಸಲಾಯಿತು. ನಂತರ ನಮಗೆ 2016 ರಲ್ಲಿ ಲೇ ಆಫ್‌ ನೀಡಿ, ಇಲ್ಲಿನ ರೇಷ್ಮೆ ಕೃಷಿ ತರಬೇತಿ ಕೇಂದ್ರಕ್ಕೆ ವರ್ಗಾಹಿಸಲಾಯಿತು. ಆದರೆ, ಜುಲೈ, 2017 ರಿಂದ ವೇತನವೇ ನೀಡಿಲ್ಲ.

ಜೀವನ ನಡೆಸುವುದು ಕಷ್ಟವಾಗಿದೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಬಳಿ ವಿಚಾರಿಸಿದರೆ, ಏನೇನೊ ಸಬೂಬು ಹೇಳಿ ಕಳುಹಿಸುತ್ತಾರೆ. ಸಮಸ್ಯೆ ಹೇಳಿಕೊಳ್ಳಲು ಮುಖ್ಯಮಂತ್ರಿ ಕಚೇರಿಗೆ ತೆರಳಿದರೂ, ಅಲ್ಲಿನ ಅಧಿಕಾರಿಗಳು ಕೂಡ ಸಮಸ್ಯೆ ಆಲಿಸದೇ ವಾಪಸು ಕಳುಹಿಸುತ್ತಾರೆ’ ಎಂದು ರೇಷ್ಮೆ ಕೃಷಿ ತರಬೇತಿ ಕೇಂದ್ರ ನೌಕರ ಎ.ಕೆ.ಬಸವರಾಜಪ್ಪ ಅಳಲು ತೋಡಿಕೊಂಡರು.

ಇದೇ ಅಭಿಪ್ರಾಯವನ್ನು ಚಿತ್ರದುರ್ಗದ ರೇಷ್ಮೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಟಿ.ರುದ್ರಪ್ಪ ಹಾಗೂ ರಾಣೆಬೆನ್ನೂರಿನ ರೇಷ್ಮೆ ಇಲಾಖೆಯಲ್ಲಿನ ಕಲಾವತಿ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT